ಸೋಮವಾರಪೇಟೆ, ಏ. ೨೯: ದಿನೇ ದಿನೇ ಅಧಿಕವಾಗುತ್ತಿರುವ ಕೊರೊನಾ ವೈರಸ್‌ನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಜಾರಿಗೆ ತಂದಿದ್ದು, ಅನಗತ್ಯವಾಗಿ ಸಂಚರಿಸದAತೆ ಎಷ್ಟೇ ಸೂಚನೆ ನೀಡಿದರೂ ಕೆಲವರು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ.
ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರೂ ಸಹ, ಕೆಲವರು ಸುಖಾಸುಮ್ಮನೆ ದ್ವಿಚಕ್ರ ವಾಹನಗಳಲ್ಲಿ ಪಟ್ಟಣದಲ್ಲಿ ಸುತ್ತುವುದು ಮಾಮೂಲಾಗಿದೆ. ಪೊಲೀಸರನ್ನು ಕಂಡೊಡನೆ ಬದಲಿ ಮಾರ್ಗದಲ್ಲಿ ಚಲಿಸುವ ಚಾಕಚಕ್ಯತೆ ಹೊಂದಿರುವ ಇಂತಹ ಮಂದಿಯನ್ನು ಪಟ್ಟಣದಿಂದ ಓಡಿಸುವುದೇ ಪೊಲೀಸರಿಗೆ ಕೆಲಸವಾಗಿದೆ.
ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಅತೀ ತುರ್ತು ಕೆಲಸಗಳಿಗೆ ಅವಕಾಶ ಕಲ್ಪಿಸುತ್ತಿರುವ ಪೊಲೀಸರು, ಅನಗತ್ಯವಾಗಿ ತಿರುಗುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಇಲ್ಲಿನ ಜೂನಿಯರ್ ಕಾಲೇಜು, ಕಕ್ಕೆಹೊಳೆ ಜಂಕ್ಷನ್, ಬಾಣಾವರ ರಸ್ತೆ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾರೆ. ಎಷ್ಟು ತಿಳುವಳಿಕೆ ನೀಡಿದರೂ ಮತ್ತದೇ ಚಾಳಿ ಮುಂದುವರೆಸಿರುವ ಮಂದಿಗೆ ಪೊಲೀಸರು ಬೇರೆ ದಾರಿಯಿಲ್ಲದೇ ‘ದಂಡA ದಶಗುಣಂ’ ಎಂಬAತೆ ಲಾಠಿ ರುಚಿ ತೋರಿಸುತ್ತಿದ್ದಾರೆ.