ಕೂಡಿಗೆ, ಏ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಕೊರೊನಾ ಸೋಂಕಿನ ವ್ಯಕ್ತಿಗಳು ಪತ್ತೆಯಾದ ಹಿನ್ನೆಲೆ ಅಯಾ ಪ್ರದೇಶದಲ್ಲಿ ನಿರ್ಬಂಧಿತ ವಲಯ ಎಂದು ಘೋಷಣೆ ಮಾಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪ ವಿವೇಕಾನಂದ ರೋಡ್, ಹೆಗ್ಗಡಹಳ್ಳಿ, ಮಲ್ಲೇನಹಳ್ಳಿ, ಭುವನಗಿರಿ ವಲಯದ ಕೆಲ ಪ್ರದೇಶದಲ್ಲಿ ನಿರ್ಬಂಧ ವಲಯ ಎಂದು ಸೂಚನಾಫಲಕವನ್ನು ಹಾಕಲಾಗಿದೆ.
ಈ ಸಂದರ್ಭ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.