ಕೂಡಿಗೆ, ಏ. ೨೯: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ಬೀದಿಗಳಲ್ಲಿ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಲಾಯಿತು.
ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಅಲ್ಲದೆ ವಾಹನದಲ್ಲಿ, ಡ್ರಂನಲ್ಲಿ ಔಷಧಿಯ ದ್ರಾವಣವನ್ನು ತುಂಬಿಸಿಕೊAಡು ಗ್ರಾಮದ ಬೀದಿಗಳಲ್ಲಿ ಸಿಂಪಡಣೆ ಮಾಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜ್, ಅಭಿವೃದ್ಧಿ ಅಧಿಕಾರಿ ಸುಮೇಶ್ ಸೇರಿದಂತೆ ಆಯಾ ವಾರ್ಡ್ನ ಸದಸ್ಯರು ಹಾಜರಿದ್ದರು.
ಇದೇ ರೀತಿ ಕೂಡುಮಂಗಳೂರು ವ್ಯಾಪ್ತಿಯಲ್ಲಿಯೂ ಪಂಚಾಯಿತಿ ವತಿಯಿಂದ ಚಿಕ್ಕತ್ತೂರು, ದೊಡ್ಡತ್ತೂರು, ಬಸವತ್ತೂರು ಗ್ರಾಮಗಳಲ್ಲಿ ಔಷಧಿ ಸಿಂಪಡಿಸಲಾಯಿತು.