ಮಡಿಕೇರಿ, ಏ. ೨೯: ಕೊಡಗು ಜಿಲ್ಲೆಯಲ್ಲಿನ ಮಾಜಿ ಸೈನಿಕರ ಸಮಸ್ಯೆಗಳಿಗೆ ಸಂಬAಧಿಸಿದAತೆ ಚರ್ಚಿಸಲು ಮಾಜಿ ಸೈನಿಕರ ಅದಾಲತ್ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಇತ್ತೀಚೆಗೆ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಅವರನ್ನು ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ವಿ.ಬಿ. ಕಾರ್ಯಪ್ಪ, ಕಾರ್ಯದರ್ಶಿ ನಿವೃತ್ತÀ ಮೇಜರ್ ಓಡಿಯಂಡ ಚಿಂಗಪ್ಪ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಸೈನಿಕರ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಗಳು ಮೊದಲು ಸೈನಿಕ ಕಲ್ಯಾಣ ಇಲಾಖೆ ಸಮಿತಿಯ ಸಭೆಯನ್ನು ನಡೆಸಿ ಚರ್ಚಿಸಲಾಗುವುದು. ಬಳಿಕ ಹಲವು ಸಮಯದಿಂದ ನಡೆಯದಿರುವ ಮಾಜಿ ಸೈನಿಕರ ಅದಾಲತ್ ನಡೆಸುವುದಾಗಿ ಭರವಸೆ ನೀಡಿದ್ದಾಗಿ ಕಾರ್ಯದರ್ಶಿ ಚಿಂಗಪ್ಪ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಿಂದ ಹದಿನೈದು ಸಾವಿರದವರೆಗೆ ಮಾಜಿ ಸೈನಿಕರು, ವಿಧವೆಯರು, ಸೈನಿಕರ ಅವಲಂಭಿತರು ವಾಸವಾಗಿರುತ್ತಾರೆ. ಇದರಲ್ಲಿ ಎಲ್ಲಾ ಮಾಜಿ ಸೈನಿಕರು ಕಡಿಮೆ ಪಕ್ಷ ೧೫ ವರ್ಷದಿಂದ ೪೦ ವರ್ಷದವರೆಗೆ ಸೇವೆ ಸಲ್ಲಿಸಿ ಕೊಡಗು ಜಿಲ್ಲೆಗೆ ಬಂದು ನೆಲಿಸಿರುತ್ತಾರೆ. ಮಾಜಿ ಸೈನಿಕರು ಈ ಜಿಲ್ಲೆಯಲ್ಲ್ಲಿ ಕೆಲವೊಂದು ಸರ್ಕಾರಿ ಸವಲತ್ತುಗಳಿಂದ ವಂಚಿತ ರಾಗಿರುವುದಾಗಿ ಪದಾಧಿಕಾರಿಗಳು ಗಮನ ಸೆಳೆದರು.

ಸರ್ಕಾರಿ ಜಾಗ ಮಂಜೂರಾತಿ ವಿಷಯದಲ್ಲಿ ೨೦೦೦-೦೧ನೇ ಇಸವಿಯಿಂದ ಈವರೆಗೆ ಸಲ್ಲಿಸಲಾದ ಸುಮಾರು ೩೦೦ ಅರ್ಜಿಗಳು ವಿಲೇವಾರಿಗೆ ಬಾಕಿ ಇರುತ್ತದೆ. ಜಿಲ್ಲಾಡಳಿತ ಮತ್ತು ಸರ್ಕಾರದವರು ಯಾವೊಂದು ನಿಲುವು ತೆಗೆದು ಕೊಳ್ಳದೇ ಇರುವುದರಿಂದ ಇವತ್ತಿನ ದಿನಗಳಲ್ಲಿ ಯಾವುದೇ ಮಾಜಿ ಸೈನಿಕರಿಗೂ ಜಾಗ ಮಂಜೂರಾತಿ ಆಗುತ್ತಿಲ್ಲ. ಹಾಗೆ ೧೦-೧೫ ವರ್ಷದಿಂದ ಜಾಗವನ್ನು ಅಕ್ರಮಗೊಳಿಸಿ ವ್ಯವಹಾಯ ಮಾಡಿ ಅವರ ಸ್ವಾಧೀನದಲ್ಲಿ ಇರುವ ಜಾಗವನ್ನು ಏಕಾಏಕಿ ಜಿಲ್ಲಾ ಆಡಳಿತ ಆದೇಶದಂತೆ ಕಂದಾಯ ಇಲಾಖೆಯವರು ತೆರವುಗೊಳಿಸುವ ಕಾರ್ಯಾ ಚರಣೆಯಲ್ಲಿ ಮುಂದಾಗಿ ದ್ದಾರೆ. ಕೊಡಗಿನಲ್ಲಿ ನೆಲೆಸಿರುವ ಮಾಜಿ ಸೈನಿಕರಿಗೆ ಇವತ್ತಿನ ದಿನಗಳಲ್ಲಿ ಯಾವುದೇ ಜಾಗ ಮಂಜೂರಾತಿ ಆಗುತ್ತಿಲ್ಲ. ಕೊಡಗಿನಲ್ಲಿ ಇರುವ ಸರಕಾರಿ ಜಾಗವನ್ನು ಇತರ ರಾಜ್ಯದಿಂದ ಬಂದವರಿಗೆ ಮಂಜೂರಾತಿ ಮಾಡಲು ಮೊದಲ ಆದ್ಯತೆ ನೀಡುತ್ತಿದ್ದಾರೆ.

ಮಾಜಿ ಸೈನಿಕರಿಗೆ ಸರ್ಕಾರದಿಂದ ಕೊಡುತ್ತಿರುವ ವೈದ್ಯಕೀಯ ಸೌಲಭ್ಯಕ್ಕಾಗಿ (ಇಸಿಹೆಚ್‌ಎಸ್) ಖಾಯಂ ನಿವೇಶನಕ್ಕಾಗಿ ಸರ್ಕಾರ ದಿಂದ ಜಾಗ ಮಂಜೂರಾಗುತ್ತಿಲ್ಲ.

ಮಾಜಿ ಸೈನಿಕರ ಮನೆ ಕಂದಾಯದಲ್ಲಿ ೫೦% ರಿಯಾಯಿತಿ ಯನ್ನು ಕೊಡುವಂತೆ ಜಿಲ್ಲಾಡಳಿತ ದಿಂದ ಸುತ್ತೋಲೆ ಕೊಟ್ಟಿದ್ದರು ಪಂಚಾಯಿತಿಯಲ್ಲಿ ರಿಯಾಯಿತಿ ಸಿಗುತ್ತಿಲ್ಲ.

ಬೇರೆ ರಾಜ್ಯದಲ್ಲಿ ಕೊಡುವ ಹಾಗೆ ಸೈನಿಕರು, ಮಾಜಿ ಸೈನಿಕರಿಗೆ, ಪ್ರಶಸ್ತಿ ಪುರಸ್ಕಾರ ಪಡೆದವರು ಮತ್ತು ಯುದ್ಧ ದಲ್ಲಿ ವೀರಮರಣ ವನ್ನಪ್ಪಿದವರಿಗೆ ನಮ್ಮ ಸರ್ಕಾರ ದಿಂದಲೂ ನಿರ್ದಿಷ್ಟ ಸವಲತ್ತುಗಳು ಸಿಕ್ಕುವಂತಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

೩ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಯವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿ ಯ ಉಪಸ್ಥಿತಿಯಲ್ಲಿ ಸೈನಿಕ ಅದಾಲತ್, ಸಂಪರ್ಕ ಸಭೆ ನಡೆಯಬೇಕು.

ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಕರ್ಣಂಗೇರಿ ಗ್ರಾಮದ ಸರ್ವೆ ನಂ. ೫೨/೮ರಲ್ಲಿ ಮಂಜೂರಾಗಿರುವ ೭ ಸೆಂಟ್ ಜಾಗವನ್ನು ಕಂದಾಯ ಇಲಾಖೆಯಿಂದ ಜಾಗವನ್ನು ಗುರುತಿಸಿ ಮಾಜಿ ಸೈನಿಕರ ಸಂಘಕ್ಕೆ ಹಸ್ತಾಂತರ ಮಾಡಬೇಕು.

ಕರ್ನಾಟಕ ಸರಕಾರದ ಆದೇಶದಂತೆ ನಿವೇಶನವಿಲ್ಲದ ಮಾಜಿ ಸೈನಿಕರಿಗೆ ಮತ್ತು ಅವಲಂಭಿತರಿಗೆ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಟ ಒಂದು ಮನೆ ಕೊಡುವಂತೆ ಆದೇಶವಿದ್ದರು ಈವರೆಗೆ ಯಾವುದೊಂದು ನಿವೇಶನ ಮನೆ ಇಲ್ಲದ ಮಾಜಿ ಸೈನಿಕರಿಗೆ ನೀಡಿರುವು ದಿಲ್ಲ. ಆದುದ್ದರಿಂದ ಸರಕಾರದ ಆದೇಶವನ್ನು ಎಲ್ಲಾ ಗ್ರಾಮ ಪಂಚಾಯಿಗಳಿಗೆ ನಿರ್ದೇಶನ ನೀಡುವಂತೆಯೂ ಮನವಿ ಮಾಡ ಲಾಗಿದೆ. ಈ ಸಂದರ್ಭ ಸಂಘದ ಉಪಾಧ್ಯಕ್ಷ ಕರ್ನಲ್ ಚಿಣ್ಣಪ್ಪ, ಕರ್ನಲ್ ಗಣೇಶ್ ಮತ್ತಿತರರು ಪಾಲ್ಗೊಂಡಿ ದ್ದರು.