ಪೊನ್ನಂಪೇಟೆ: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಅವರು ಸ್ವಯಂಪ್ರೇರಿತವಾಗಿ ಆಹಾರ ಕಿಟ್ ವಿತರಣೆ ಮಾಡಿದರು.
ಕೊರೊನಾ ಸೋಂಕು ತಗುಲಿದ ೬ನೇ ವಾರ್ಡ್ನ ಕೃಷ್ಣ ನಗರದ ೫ ಕುಟುಂಬಗಳಿಗೆ ಆಹಾರ, ಅಗತ್ಯ ವಸ್ತುಗಳನ್ನು ಮನೆ, ಮನೆಗೆ ವಿತರಿಸಿದರು. ಈ ಸಂದರ್ಭ ಸದಸ್ಯರಾದ ಅಡ್ಡಂಡ ನಿಲನ್ ಸುಬ್ರಮಣಿ, ಬಿಜೆಪಿ ಸಹ ಪ್ರಮುಖ್ ಹೆಚ್.ಕೆ. ಸಂತೋಷ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹೆಚ್.ಪಿ. ರಮೇಶ್ ಇದ್ದರು.ಸೋಮವಾರಪೇಟೆ: ಕೊರೊನಾ ಸೋಂಕಿನಿAದಾಗಿ ಸೀಲ್ಡೌನ್ ಮಾಡಿರುವ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕ ಕುಟುಂಬಗಳಿಗೆ ಇನ್ನರ್ ವೀಲ್ ಕ್ಲಬ್ನಿಂದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕ್ಲಬ್ನ ಅಧ್ಯಕ್ಷೆ ಕವಿತ ವಿರೂಪಾಕ್ಷ ಸೇರಿದಂತೆ ಪದಾಧಿಕಾರಿಗಳು, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ ಅವರ ಉಪಸ್ಥಿತಿಯಲ್ಲಿ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.