ಮಡಿಕೇರಿ, ಏ. ೨೯: ನಗರಸಭೆ ಚುನಾವಣೆಯ ಮತ ಎಣಿಕೆ ಸಂಬAಧ ಮತ ಎಣಿಕೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ಮಾಹಿತಿ ನೀಡಲಾಯಿತು. ಚುನಾವಣಾ ಮಾಸ್ಟರ್ ತರಬೇತಿದಾರ ಕೆ.ಜೆ. ದಿವಾಕರ ಮತ ಎಣಿಕೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಚುನಾವಣಾಧಿಕಾರಿಗಳಾದ ಡಾ. ನಂಜುAಡೇಗೌಡ, ಸಲೀಂ, ಶಶಿಧರ, ತಹಶೀಲ್ದಾರ್ ಮಹೇಶ್, ಕೆ.ಸಿ.ದಯಾನಂದ, ಪ್ರಶಾಂತ್, ಅನಿಲ್ ಬಗಟಿ ಇತರರು ಇದ್ದರು. ತಾ. ೩೦ ರಂದು (ಇಂದು) ಮತ ಎಣಿಕೆ ನಡೆಯುತ್ತಿರುವ ಕೇಂದ್ರಗಳಲ್ಲಿ ಹಾಜರಾಗುವ ಅಭ್ಯರ್ಥಿ ಅಥವಾ ಎಣಿಕೆ ಏಜೆಂಟರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಅಥವಾ ಕೋವಿಡ್ ಇಲ್ಲದಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಅನುವು ಮಾಡಿಕೊಡತಕ್ಕದ್ದು. ಮತ ಎಣಿಕೆ ನಡೆಯುತ್ತಿರುವ ಪ್ರತಿ ಟೇಬಲ್ಲಿಗೂ ಸ್ಯಾನಿಟೈಸರ್ ಅನ್ನು ಒದಗಿಸತಕ್ಕದ್ದು. ಮತ ಎಣಿಕೆ ಕೇಂದ್ರದೊಳಗೆ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು. ಮತ ಎಣಿಕೆ ಕೇಂದ್ರದೊಳಗೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡತಕ್ಕದ್ದು. ವಾರ್ಡ್ವಾರು ಮತ ಎಣಿಕೆ ಮಾಡುವುದು ಹಾಗೂ ಸಂಬAಧಪಟ್ಟ ಅಭ್ಯರ್ಥಿ/ಏಜೆಂಟರನ್ನು ವಾರ್ಡಿನ ಎಣಿಕೆ ಮುಗಿದ ಕೂಡಲೇ ನಿರ್ಗಮಿಸಲು ಸೂಚಿಸಿ ನಂತರ ಮುಂದಿನ ವಾರ್ಡಿನ ಎಣಿಕೆ ಮಾಡುವುದು. ಈ ಮೇಲ್ಕಂಡ ಅಂಶಗಳನ್ನು ಪಾಲಿಸುವಂತೆ ತಹಶೀಲ್ದಾರ್ ಮಹೇಶ್ ಸೂಚಿಸಿದ್ದಾರೆ.