ಚೆಟ್ಟಳ್ಳಿ, ಏ. ೨೯: ಚೆಟ್ಟಳ್ಳಿ ಗ್ರಾಮಕ್ಕೆ ಒಳಪಟ್ಟ ಕೂಡ್ಲೂರು ಚೆಟ್ಟಳ್ಳಿಯಲ್ಲಿ ಪೈಸಾರಿ ಒತ್ತುವರಿ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಆಸ್ಪತ್ರೆ ಸೇರಿದ ಘಟನೆ ಸಂಭವಿಸಿದೆ.

ಕೆ. ಚೆಟ್ಟಳ್ಳಿ ಗ್ರಾಮಕ್ಕೆ ಸೇರಿದ ದಯಾನಂದ ಎಂಬವರು ಪೈಸಾರಿ ಒತ್ತುವರಿ ಮಾಡಲು ಜೆ.ಸಿ.ಬಿ. ಯಂತ್ರವನ್ನು ತಂದು ಕೆಲಸ ನಿರ್ವಹಿಸುತಿದ್ದಾಗ ಅದೇ ಗ್ರಾಮದ ಆನಂದ ಎಂಬವರು ತಡೆಯಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ದಯಾನಂದ ಆನಂದನ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ, ಆನಂದನವರ ಮಗ ಕಿರಣ್ ಮಧ್ಯಪ್ರವೇಶ ಮಾಡಲಾಗಿ, ಪೈಪ್ ರಿಂಚಿನಿAದ ಹೊಡೆದ ಏಟು ಕಿರಣ್ ತಲೆಗೆ ಬಿದ್ದು ತೀವ್ರ ಗಾಯಗೊಂಡಿದ್ದಾನೆ.

ಗಾಯಗೊಂಡ ಕಿರಣನನ್ನು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕೆತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಜಾಗವನ್ನು ದಯಾನಂದ ಒತ್ತುವರಿ ಮಾಡಿದೆ ಆದಲ್ಲಿ ಅಲ್ಲಿನ ಹಿಂದೂ ಸ್ಮಶಾನಕ್ಕೆ ದಾರಿ ಇರುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟನೆಯ ಸ್ಥಳಕ್ಕೆ ಚೆಟ್ಟಳ್ಳಿಯ ಪೊಲೀಸ್, ಪಿ.ಡಿ.ಓ. ನಂದೀಶ್ ಕುಮಾರ್. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಒತ್ತುವರಿ ಜಾಗವನ್ನು ಯಥಾಸ್ಥಿತಿ ಕಾಯ್ದಿರಿಸಲು ಅಭಿವೃದ್ಧಿ ಅಧಿಕಾರಿ ಆದೇಶ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.