ಸಿದ್ದಾಪುರ, ಏ. ೨೮: ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನಲ್ಲಿ ೨೫ ಮಂದಿಯಲ್ಲಿ ಸೊಂಕು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ವತಿಯಿಂದ ಸೊಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಯಿತು. ಕಕ್ಕಟ್ಟುಕಾಡು ವ್ಯಾಪ್ತಿಯನ್ನು ಕಂಟೈನ್‌ಮೆAಟ್ ವಲಯ ಎಂದು ಘೋಷಿಸಿದ್ದು, ಆರೋಗ್ಯ ಸಹಾಯಕ ಸುದರ್ಶನ್ ನೇತೃತ್ವದಲ್ಲಿ ಗ್ರಾಮದ ಮನೆಗಳಿಗೆ ತೆರಳಿ ಸೊಂಕಿತರಿಗೆ ಅಗತ್ಯ ಮಾತ್ರೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಇದ್ದರು.