ಸುಂಟಿಕೊಪ್ಪ, ಏ. ೨೮: ರಾಷ್ಟೀಯ ಹೆದ್ದಾರಿ ಗದ್ದೆಹಳ್ಳದಲ್ಲಿ ಸಂಜೆ ಮೋಡ ಕವಿದ ವಾತಾವರಣ ವಿದ್ದು, ಭಾರೀ ಗುಡುಗು, ಸಿಡಿಲು ಬಡಿತಕ್ಕೆ ಯಂಕನ ಜ್ಯೋತುಕುಮಾರ್ ಅವರ ಮನೆ ಪಕ್ಕದ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಕೊಂಡಿದೆ. ಅದೃಷ್ಟವಶಾತ್ ಸಮೀಪದ ಮನೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ.