ಸಿದ್ದಾಪುರ, ಏ. ೨೮: ಮರದಿಂದ ಬಿದ್ದು ಕಾರ್ಮಿಕನೋರ್ವ ಸಾವನ್ನ ಪ್ಪಿರುವ ಘಟನೆ ಪಾಲಿಬೆಟ್ಟದಲ್ಲಿ ಸಂಭವಿಸಿದೆ. ಪಾಲಿಬೆಟ್ಟದ ನಲ್ಲು ಕೋಟೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಮನು ನಾಯ್ಕ್ (೩೬) ಎಂಬಾತ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಿಕವಾಗಿ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಗಂಭೀರ ಗಾಯ ಗೊಂಡು ಮೃತಪಟ್ಟಿದ್ದಾನೆ. ಒಡಿಶಾ ರಾಜ್ಯದ ಮೃತ ಮನುನಾಯ್ಕ್ ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾನೆ. ಘಟನೆ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.