ಮಡಿಕೇರಿ, ಏ. ೨೮: ಕೊಡಗಿನಲ್ಲಿ ದಿನವೂ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಆದರೆ, ಸಾವಿನ ಪ್ರಮಾಣ ಕಡಿಮೆಯಿದ್ದುದು ಇದೀಗ ದಿಢೀರ್ ಏರಿಕೆ ಕಂಡಿರುವದು ಆತಂಕಕಾರಿಯೆನಿಸಿದೆ. ನಿನ್ನೆ ರಾತ್ರಿ ೯ ರಿಂದ ಇಂದು ಬೆ. ೯ ರವರೆಗೆ ಜಿಲ್ಲೆಯ ಕೋವಿಡ್ ಆಸ್ಪÀತ್ರೆಯಲ್ಲಿ ೫ ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.
ಈ ನಡುವೆ ೯೭ ಮಂದಿಗೆ ಆಮ್ಲಜನಕ ನಿರಂತರ ಸರಬರಾಜು ಮಾಡುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಸೋಂಕಿತರಿಗೆ ವೈದ್ಯರು ಮತ್ತು ಸಿಬ್ಬಂದಿ ಶ್ರಮಪಟ್ಟು ಚಿಕಿತ್ಸೆ ನೀಡುತ್ತಿದ್ದಾರೆ ಎಂದು
(ಮೊದಲ ಪುಟದಿಂದ) ಮುಖ್ಯ ವೈದ್ಯಾಧಿಕಾರಿ ಡಾ. ಲೋಕೇಶ್ “ಶಕ್ತಿ” ಗೆ ತಿಳಿಸಿದರು.
ವಿಚಿತ್ರವೆಂದರೆ, ಮೂಲಗಳ ಪ್ರಕಾರ ಈಗಿನ ಕೊರೊನಾ ಎರಡನೆ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾ ಪ್ರಾರಂಭದ ದಿನಗಳಲ್ಲಿ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗುತ್ತಿತ್ತು. ಬಹುತೇಕ ಮಂದಿ ಶೀಘ್ರ ಗುಣಮುಖರಾಗಿ ಅಸ್ಪತ್ರೆಯಿಂದ ಹೊರಬರುತ್ತಿದ್ದರು. ಆದರೆ, ಈಗಿನ ಎರಡನೆ ಅಲೆಗೆ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದರೂ ಅತಿ ವೇಗ ಗತಿಯಲ್ಲಿ ಹಬ್ಬುತ್ತಿರುವದರಿಂದ ಅನೇಕ ಸೋಂಕಿತರು ಆಮ್ಲ ಜನಕದಿಂದಷ್ಟೆ ರಕ್ಷಿಸಲ್ಪಡುತ್ತಿದ್ದು ವೈದ್ಯಕೀಯ ವಲಯದಲ್ಲಿಯೇ ಆತಂಕ ಮೂಡಿಸಿದೆ. ಇಂದು ಕೆಲವು ಮಂದಿ ಸಾವಿಗೀಡಾದ ಸೋಂಕಿತರ ಬಂಧುಗಳು ಈ ಬಗ್ಗೆ “ಶಕ್ತಿ” ಯೊಂದಿಗೆ ಮಾತನಾಡಿ ಅತೀವ ದುಃಖ ತೋಡಿಕೊಂಡರು. ಇಂದು ಸಾವೀಗೀಡಾದ ಕೊಡ್ಲಿಪೇಟೆಯ ರಾಮು ಎಂಬವರ ಪುತ್ರ ರುದ್ರೇಶ್ “ಶಕ್ತಿ” ಯೊಂದಿಗೆ ಮಾತನಾಡಿ ನಮ್ಮ ತಂದೆ ಚೇತರಿಸಿಕೊಳ್ಳುತ್ತಿದ್ದರೆಂಬ ಮಾಹಿತಿ ಆಸ್ಪತ್ರೆೆಯಿಂದ ಲಭ್ಯವಾಗುತ್ತಿತ್ತು. ಇಂದು ಅವರನ್ನು ದೂರದಿಂದಲಾದರೂ ನೋಡಬಹುದೇನೋ ಎಂದು ನಾನು, ನನ್ನ ಸಹೋದರ ಹಾಗೂ ನನ್ನ ತಾಯಿ ಮಡಿಕೇರಿಗೆ ಬಂದೆವು. ಬಂದು ತಲುಪುತ್ತ್ತಿದ್ದಂತೆ ನನ್ನ ತಂದೆ ಅಸು ನೀಗಿದ್ದಾರೆ ಎಂಬ ಮಾಹಿತಿ ಸಿಕ್ಕಿ ಎಲ್ಲರಿಗೂ ಆಘಾತವಾಯಿತು. ಕೊನೆಗೆ ಪಾರ್ಥಿವ ಶರೀರವನ್ನು ಪಡೆಯಲು ಶವಾಗಾರಕ್ಕೆ ತೆರಳಿ ಕಾಯುವ ಪರಿಸ್ಥಿತಿ ಬಂದಿತು ಎಂದು ದುಃಖಿಸಿದರು.
ಇತ್ತೀಚೆಗೆ ಕೋವಿಡ್ ಪರೀಕ್ಷೆಗೆ ನಿತ್ಯ ಒಳಪಡುವವರ ಸಂಖ್ಯೆ ೧,೫೦೦ರಿಂದ ೨೦೦೦ ದವರೆಗೂ ಹೆಚ್ಚುತ್ತಿದೆ. ಕೋವಿಡ್ ಸೋಂಕಿತರ ಸಂಖ್ಯೆ ದಿನಕ್ಕೆ ೫೦೦ ನ್ನೂ ಮೀರುತ್ತಿದೆ. ಇಂದು ಸೋಂಕಿತರ ಸಂಖ್ಯೆ ೫೧೬ ಎಂದು ದೃಢಪಟ್ಟಿದೆ. ಆಶ್ಚರ್ಯವೆಂದರೆ, ಏ. ೧೭ ರವರೆಗೆ ಸಾವಿನ ಸಂಖೈ ಒಟ್ಟು ೮೩ ಇದ್ದುದು ಕೇವಲ ೧೨ ದಿನಗಳಲ್ಲಿ ೯೮ ತಲುಪಿದ್ದು ! ಅಂದರೆ. ೧೨ ದಿನಗಳಲ್ಲಿ ೧೬ ಮಂದಿ ಸಾವಿಗೀಡಾಗಿರುವದು ಆತಂಕಕಾರಿಯೆನಿಸಿದೆ. ಈ ಪೈಕಿ ನಿನ್ನೆ ಒಂದೇ ದಿನ ೫ ಸಾವಾಗಿರುವದು ಇನ್ನೂ ಕಳವಳಕಾರಿಯೆನಿಸಿದೆ.
ಅಶ್ವಿನಿಯಲ್ಲಿ ತುರ್ತು ಸೇವೆ
ಇದೀಗ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರುಗಳ ಹಾಗೂ ಸಿಬ್ಬಂದಿಯ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತದಿಂದÀ ಕೋವಿಡೇತರ ವಿಭಾಗ ಹೊಂದಿರುವ ಅಶ್ವಿನಿ ಆಸ್ಪತ್ರೆÉಯಲ್ಲಿ ತುರ್ತು ಸೇವೆಯನ್ನು ಮಾತ್ರ ಪರಿಗಣಿಸಲು ಚರ್ಚೆ ನಡೆಸಲಾಗಿದೆ. ಅನೇಕ ಕಾಯಬಹುದಾಂತಹÀ ಶಸ್ತç ಚಿಕಿತ್ಸೆಗಳನ್ನು ಮುಂದೂಡುವ ಕುರಿತು ನಿರ್ಧಾರÀ ಕೈಗೊಳ್ಳುತ್ತಿರುವದಾಗಿ ‘ಶಕ್ತಿ’ ಗೆ ತಿಳಿದುಬಂದಿತು. ಇದರಿಂದ ಕೋವಿಡ್ ಆಸ್ಪತ್ರೆಯಲ್ಲಿ ಒತ್ತಡ ಕಡಿಮೆ ಮಾಡುವ ಸಾಧ್ಯತೆಯಿದ್ದು, ಹೆಚ್ಚಿನ ವೈದ್ಯರು, ಸಿಬ್ಬಂದಿಯನ್ನು ಬಳಸಿಕೊಳ್ಳುವ ಅವಕಾಶ ದೊರಕುತ್ತದೆ. ಇದೀಗ ಇಂದು ಸುಮಾರು ೨೫ ಮಂದಿ ರೋಗಿಗಳು ಅಶ್ವಿನಿ ಆಸ್ಪತ್ರೆಯಲ್ಲಿ ಕೋವಿಡೇತರ ಕಾಯಿಲೆಗಳಿಗೆ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತ್ತಿದ್ದಾರೆ. ಈ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದು ಅವರೂ ಕರ್ತವ್ಯಕ್ಕೆ ಬಾರದಿರುವದರಿಂದ ಇರುವ ಸಿಬ್ಬಂದಿಯೇ ಹೆಚ್ಚಿನ ಸಮಯ ಕಾರ್ಯ ನಿರ್ವಹಿಸುವಂತಹ ಅನಿವಾರ್ಯತೆ ಬಂದೊದಗಿದೆ.
ಸೋAಕಿತರ ಸಂಖ್ಯೆ
ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ೮ ಗಂಟೆ ವೇಳೆಗೆ ಹೊಸ ೫೧೬ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೪೮೮ ಆರ್‌ಟಿಪಿಸಿಆರ್ ಮತ್ತು ೨೮ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಮಡಿಕೇರಿ ತಾಲೂಕಿನಲ್ಲಿ ೧೩೨ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ. ಈ ಪೈಕಿ ೧೨೪ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೮ ಪ್ರಕರಣಗಳು ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ೨೧೪ ಹೊಸ ಪ್ರಕರಣಗಳು ಕಂಡುಬAದಿದೆ. ಈ ಪೈಕಿ ೧೯೯ ಆರ್‌ಟಿಪಿಸಿಆರ್ ಮತ್ತು ೧೫ ಪ್ರಕರಣಗಳು ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ವೀರಾಜಪೇಟೆ ತಾಲೂಕಿನಲ್ಲಿ ೧೭೦ ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ೧೬೫ ಆರ್‌ಟಿಪಿಸಿಆರ್ ಮತ್ತು ೫ ಪ್ರಕರಣಗಳು ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೯೮೦೪ ಆಗಿದ್ದು, ೬೯೧೩ ಮಂದಿ ಗುಣಮುಖರಾಗಿದ್ದಾರೆ. ೨೭೯೫ ಸಕ್ರಿಯ ಪ್ರಕರಣಗಳಿದ್ದು, ೯೮ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೪೧೪ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.