ಬೆಂಗಳೂರು, ಏ. ೨೮: ರಾಜ್ಯ ಸರ್ಕಾರ ೧೮ ರಿಂದ ೪೪ ವಯಸ್ಸಿನ ನಡುವಿನ ನಾಗರಿಕರಿಗೆ ಕೋವಿಡ್-೧೯ ಲಸಿಕೆಯನ್ನು ನೀಡುವ ಯೋಜನೆಯನ್ನು ಶೀಘ್ರದಲ್ಲಿ ರಾಜ್ಯದ್ಯಾಂತ ಆರಂಭಿಸಲಿದ್ದು, ಅದಕ್ಕಾಗಿ ಒಂದು ಕೋಟಿ ಲಸಿಕೆಗಳನ್ನು ಕೊಳ್ಳಲು ಕ್ರಮವಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು. ಅವರು ಇಂದು ೩ನೇ ಹಂತದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ರಾಜ್ಯಮಟ್ಟದ ಇಲಾಖಾ ಕಾರ್ಯದರ್ಶಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ತಯಾರಿ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿರುವ ೧೮-೪೪ ವಯಸ್ಸಿನ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಲಸಿಕೆಯನ್ನು ಖರೀದಿಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ಕೋಟಿ ಲಸಿಕೆಗಳಿಗೆ ಸಂಬAಧಿಸಿದ ಕಂಪೆನಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಲಸಿಕಾ ತಯಾರಿಕಾ ಕಂಪೆನಿ ಸರಬರಾಜು ಆರಂಭಿಸಿದ ತಕ್ಷಣದಿಂದ ಯೋಜನೆ ಆರಂಭಿಸಲಾಗುವುದು ಎಂದು ಹೇಳಿದರು.

ಶೀಘ್ರದಲ್ಲಿ ೧೮-೪೪ ವಯಸ್ಸಿನವರಿಗೆ ೩ನೇ ಹಂತದ ಕೋವಿಡ್ ಲಸಿಕೆ

(ಮೊದಲ ಪುಟದಿಂದ) ೮ ರಿಂದ ೪೪ ವಯಸ್ಸಿನ ಪ್ರತಿಯೊಬ್ಬರೂ ಈ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯವಿರುತ್ತದೆ. ಈ ಪೋರ್ಟಲ್‌ನಲ್ಲಿ ಲಸಿಕೆಗೆ ಸಂಬAಧಿಸಿದAತೆ ಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ನೋಂದಣಿ ನಂತರ ಲಸಿಕೆ ಸದ್ಯದಲ್ಲಿಯೇ ಪಡೆಯುವ ಸಮಯ ಹಾಗೂ ದಿನಾಂಕವನ್ನು ತಿಳಿಯಬಹುದಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ೪೫ ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕಾ ಕಾರ್ಯಕ್ರಮ ಮೇ ೧ ರ ನಂತರ ಸಹ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.