ಶನಿವಾರಸಂತೆ, ಏ. ೨೮: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕಿ ಚಂದನ (೧೨)ನನ್ನು ರಕ್ಷಿಸಲು ಹೋದ ಆಕೆಯ ಚಿಕ್ಕಪ್ಪ ಸತೀಶ್ (೨೭)ನ್ನು ಸೇರಿದಂತೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದಲ್ಲಿ ಸಂಭವಿಸಿದೆ.
ಶಿರAಗಾಲ ಗ್ರಾಮದ ಟೈಲರ್ ಹೆಚ್.ಜಿ. ವೆಂಟಕೇಶ್ ಅವರ ಪುತ್ರಿ ಚಂದನ ಹಾಗೂ ಅವರ ಚಿಕ್ಕಪ್ಪ ಸತೀಶ್ ತಮ್ಮ ಮನೆಯ ಪಕ್ಕದಲ್ಲಿರುವ ವಿಶ್ವನಾಥ್ ಅವರಿಗೆ ಸೇರಿದ ಕೆರೆಯ ಬಳಿ ತಾ. ೨೭ ರಂದು ಸಂಜೆ ೫ ಗಂಟೆಗೆ ಮೀನು ಹಿಡಿಯುತ್ತಿರುವ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಚಂದನಳು ಕೆರೆಯ ನೀರಿಗೆ ಬಿದ್ದು ಮುಳುಗಲಾರಂಭಿಸಿದಾಗ ಆಕೆಯನ್ನು ರಕ್ಷಿಸಲು ಚಿಕ್ಕಪ್ಪ ಸತೀಶ್ ಕೆರೆಯ ನೀರಿಗೆ ಇಳಿದು, ಈಜು ಬಾರದ ಕಾರಣ ಚಂದನಳೊAದಿಗೆ ಸತೀಶನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.
ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಇಬ್ಬರ ಮೃತದೇಹವನ್ನು ಹೊರ ತೆಗೆದು ರಾತ್ರಿ ೧೦ ಗಂಟೆಗೆ ಶನಿವಾರಸಂತೆ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು. ಈ ಬಗ್ಗೆ ಚಂದನಳ ತಂದೆ ವೆಂಕಟೇಶ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಸಹಾಯಕ ಠಾಣಾಧಿಕಾರಿ ಎಚ್.ಎಂ. ಗೋವಿಂದ್, ವಿಧಿ ೧೭೪ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ. ಮೃತ ಸತೀಶ್‌ಗೆ ಕೊರೊನಾ ಪಾಸಿಟಿವ್ ಇರುವುದು ಕಂಡು ಬಂದು ಈರ್ವರ ಮೃತದೇಹವನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.