ಮಡಿಕೇರಿ, ಏ. ೨೮: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಡಿಕೇರಿ ನಗರಸಭಾ ಮಾಜಿ ಸದಸ್ಯೆ ರೋಟರಿ ಮಿಸ್ಟಿ ಹಿಲ್ಸ್ನ ನಿರ್ದೇಶಕಿ ಹಾಗೂ ನಿನ್ನೆ ತಾನೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೆರವಂಡ ಅನಿತಾ ಅವರ ಪತಿ ನಂದಾ ಪೂವಯ್ಯ (೬೦) ಅವರು ನಿಧನರಾಗಿದ್ದಾರೆ. ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ನಂದಾ ಪೂವಯ್ಯ ಅವರು ಕಳೆದ ರಾತ್ರಿ ಶೌಚಾಲಯಕ್ಕೆಂದು ಎದ್ದು ಬಂದಾಗ ಆಕಸ್ಮಿಕವಾಗಿ ಜಾರಿ ತಲೆಗೆ ಪೆಟ್ಟಾಗಿ, ಮಿದುಳು ರಕ್ತಸ್ರಾವಕ್ಕೊಳಗಾಗಿದ್ದ ರೆನ್ನಲಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರ‍್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೃತರು ಅನಿತಾ ಹಾಗೂ ಪುತ್ರಿಯನ್ನು ಅಗಲಿದ್ದಾರೆ.