ಕುಶಾಲನಗರ, ಏ. ೨೮: ದ್ವಿಚಕ್ರ ವಾಹನಗಳ ಮೂಲಸ್ವರೂಪ ಬದಲಾಯಿಸಿ ಚಾಲನೆ ಮಾಡುತ್ತಿದ್ದ ವಾಹನ ಸವಾರರ ಬೈಕ್‌ಗಳನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.
ಈ ನಡುವೆ ತನಗೆ ಸೇರಿದ ಬುಲ್ಲೆಟ್ ಬೈಕ್ ಅನ್ನು ಕಳವು ಮಾಡಿರುವುದಾಗಿ ಪೊಲೀಸರ ವಿರುದ್ಧ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕೆ.ಎಸ್. ಅಶೋಕ್ ಎಂಬವರು ಲಿಖಿತ ದೂರು ನೀಡಿದ್ದಾರೆ.
ಬುಧವಾರ ಬೈಕ್ ಮಾಲೀಕರು ದಂಡ ತೆತ್ತು ವಾಹನಗಳನ್ನು ಬಿಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.