ವೀರಾಜಪೇಟೆ, ಏ. ೨೮: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಘದ ಕಳೆದ ೨೦೧೯-೨೦ರ ಸಾಲಿನಲ್ಲಿ ಸಂಘದಲ್ಲಿ ದುರುಪಯೋಗ ನಡೆದಿದೆ ಎಂಬ ಹಗರಣದಲ್ಲಿ ಮೈಸೂರಿನ ಲೆಕ್ಕ ಪರಿಶೋಧಕ ಎ.ಆರ್. ಜೋಶಿ ತನಿಖೆ ನಡೆಸುತ್ತಿದ್ದು ತನಿಖೆಗೆ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಸಹಕರಿಸುತ್ತಿಲ್ಲ. ಈ ಕಾರಣಕ್ಕಾಗಿ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧಕ ಜೋಶಿ ಅವರು ಆಡಳಿತ ಮಂಡಳಿಗೆ ವರದಿ ನೀಡಿದ್ದು, ವರದಿಯ ಪ್ರತಿಯನ್ನು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಹಾಗೂ ನಿರ್ದೇಶಕರಿಗೆ ಸಲ್ಲಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆಯೇ ಸಂಘದ ಕಾರ್ಯ ನಿರ್ವಹಣಾಧಿಕಾರಿ ಖುದ್ದು ತನಿಖೆಗೆ ಸಹಕರಿಸಿ ದಾಖಲೆಗಳನ್ನು ಒದಗಿಸುವುದಾಗಿ ಜನವರಿಯಿಂದ ಏಪ್ರಿಲ್ ೧೦ರ ತನಕ ಮೂರು ಬಾರಿ ದಿನಾಂಕಗಳನ್ನು ನೀಡಿದ್ದರೂ ತನಿಖೆಗೆ ಗೈರುಹಾಜರು ಹಾಗೂ ತನಿಖೆಗೆ ಆಡಳಿತ ಮಂಡಳಿಯ ನಿರ್ಲಕ್ಷö್ಯ ಕಾಣುತ್ತಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ನಿಬಂಧಕರು, ನಿರ್ದೇಶಕರಿಗೆ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಲೆಕ್ಕ ಪರಿಶೋಧಕರಿಗೆ ಒದಗಿಸಿರುವ ಕೆಲವು ದಾಖಲೆಗಳಲ್ಲಿ ನ್ಯೂನತೆ ಕಂಡು ಬಂದಿದ್ದು ಸಂಘದ ಆದಾಯ, ವೆಚ್ಚ ಒಂದಕ್ಕೊAದು ತಾಳೆಯಾಗುತ್ತಿಲ್ಲ. ಮಾರ್ಚ್ ೨೬ರೊಳಗೆ ಲೆಕ್ಕ ಪರಿಶೋಧನೆಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸರಿ ಹೊಂದಿಸಿಕೊಡುವುದಾಗಿ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದರೂ ಏಪ್ರಿಲ್ ೧೦ ರತನಕ ಯಾವುದೇ ಸರಿಯಾದ ಪ್ರಮುಖ ದಾಖಲೆಯನ್ನು ಹಾಜರುಪಡಿಸದೆ ಸತಾವಣೆ ನೀಡುತ್ತಿದ್ದಾರೆ. ಆಡಳಿತ ಮಂಡಳಿಯ ಸಹಿ ಇರುವ ಸಂಘದ ಕುಳವಾರು ಪಟ್ಟಿಯ ದಾಖಲೆ ನೀಡಿಲ್ಲ. ಎಲ್ಲ ರೀತಿಯಿಂದಲೂ ಸಂಘದ ಲೆಕ್ಕ ಪರಿಶೋಧನೆಗೆೆ ಹಿನ್ನಡೆ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಈ ತನಕ ಸಂಘದ ಲೆಕ್ಕ ಪತ್ರಗಳನ್ನು ಪರಿಶೀಲಿಸಿದಾಗ ದಾಖಲೆಗಳಲ್ಲಿ ಅನೇಕ ಲೋಪದೋಷ ಗಳು ಕಂಡುಬAದಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಲು ಕಾರ್ಯನಿರ್ವಹಣಾಧಿಕಾರಿ ತನಿಖೆಯ ಸಮಯದಲ್ಲಿ ನಿರಂತರ ಗೈರು ಹಾಜರಾಗುತ್ತಿದ್ದಾರೆ.
ಸಂಘದ ನಿರ್ದೇಶಕರ ಆರೋಪ
ಸಂಘದ ನಿರ್ದೇಶಕರಾಗಿರುವ ಏಜಾಜ್ ಅಹಮ್ಮದ್ ಕಳೆದ ೧೯-೨೦ನೇ ಸಾಲಿಗೆ ಈ ಸಂಘದಲ್ಲಿ ಪಿಗ್ಮಿ ಹಣ ಸಂಗ್ರಹ, ನಿರಖು ಠೇವಣಿ, ಷೇರು ಬಂಡವಾಳ, ಡಿ.ಸಿ.ಸಿ. ಬ್ಯಾಂಕ್‌ನಿAದ ಹೊಂದಿಕೊAಡ ಸಾಲ ರೂ. ೧ ಕೋಟಿ ೫೦ ಲಕ್ಷ, ವಾಣಿಜ್ಯ ಮಳಿಗೆಗಳ ಮುಂಗಡ ಸೇರಿದಂತೆ ಒಟ್ಟು ಆರು ಕೋಟಿ ನಗದು ಸಂಘದ ಲೆಕ್ಕದಲ್ಲಿ ವ್ಯತ್ಯಾಸ ಉಂಟಾಗಿದೆ. ಠೇವಣಿದಾರರಿಗೆ ಪಾವತಿಗೆ ಹಣವಿಲ್ಲ. ಸಂಘದಲ್ಲಿ ಸಿಬ್ಬಂದಿಗಳ ಹಾಜರು ಸಂಖ್ಯೆ ಕಡಿಮೆಯಾಗುತ್ತಿದ್ದು ಸಂಘದ ಕಾರ್ಯನಿರ್ವಹಣಾಧಿಕಾರಿ ಮೈಸೂರಿ ನಲ್ಲಿ ಶಿಬಿರ ಹೂಡಿದ್ದಾರೆ. ಇದರಲ್ಲಿ ವೀರಾಜಪೇಟೆ ಸಂಘವು ತನ್ನ ಗೋಣಿಕೊಪ್ಪ ಶಾಖೆಯಿಂದ ರೂ. ೧,೪೦,೦೦೦ ಹಣ ಸಾಲ ಪಡೆದು ಈ ತನಕ ಮರುಪಾವತಿ ಮಾಡದಿರುವು ದರಿಂದ ಈ ಶಾಖೆಯು ಮುಚ್ಚುವ ಪರಿಸ್ಥಿತಿಯಲ್ಲಿದೆ. ಮುಸ್ಲಿಂ ಸಹಕಾರ ಸಂಘದ ಲೆಕ್ಕದಲ್ಲಿ ಕೋಟಿಗಟ್ಟಳೆ ಹಣ ವ್ಯತ್ಯಾಸವಾಗಿರುವುದರ ಕುರಿತು ಸಹದ್ಯೋಗಿ ನಿರ್ದೇಶಕರುಗಳು ಇದನ್ನು ಕೂಲಂಕಷ ತನಿಖೆಯಿಂದ ಬೆಳಕಿಗೆ ತಂದು ಹಣದಲ್ಲಿ ವ್ಯತ್ಯಾಸ ಮಾಡಿರುವವರ ಕುರಿತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅಧ್ಯಕ್ಷರ ಪ್ರತಿಕ್ರಿಯೆ
ಮೂರು ತಿಂಗಳ ಮುಸ್ಲಿಂ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತಸ್ಲೀಂ ಅಕ್ತರ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಸಂಘದಲ್ಲಿ ಸುಮಾರು ಆರು ಕೋಟಿ ಹಣ ಲೆಕ್ಕಚಾರದಲ್ಲಿ ವ್ಯತ್ಯಾಸಗೊಂಡಿ ರುವ ಕುರಿತು ತನಗೆ ಏನು ಗೊತ್ತಿಲ್ಲ. ಸಂಘದ ಹಿರಿಯ ಆಪ್ತರ ಒತ್ತಾಯದ ಮೇರೆ ನಾನು ಈ ಸಂಘದ ಅಧ್ಯಕ್ಷನಾಗಿ ೨೦೨೧ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಹಿಂದೆ ಸಂಘದಲ್ಲಿ ಏನು ನಡೆದಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ಸಂಘದ ಎಲ್ಲ ಠೇವಣಿದಾರರಿಗೆ ನ್ಯಾಯ ಸಮ್ಮತವಾಗಿ ದೊರೆಯ ಬೇಕಾದ ಹಣ ಪಾವತಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇನೆ. ಸಂಘದ ಕಾರ್ಯನಿರ್ವ ಹಣಾಧಿಕಾರಿಗೆ ಸಂಘದ ಲೆಕ್ಕಚಾರದ ಸಂಬAಧದಲ್ಲಿ ತುರ್ತು ನೋಟೀಸ್ ಕಳಿಸಲಾಗಿದೆ. ೧೯-೨೦ ರ ಸಂಘದ ಆಡಿಟ್‌ಗೆ ಕಾರ್ಯ ನಿರ್ವಹಣಾ ಧಿಕಾರಿ ಸಹಕರಿಸುತ್ತಿಲ್ಲ ಎಂಬ ದೂರು ಬಂದ ಮೇಲೆ ಅಂತಿಮ ನೋಟೀಸ್ ನೀಡಲಾಗಿದೆ. ಸಂಘದ ಸದಸ್ಯರುಗಳ, ಹಿತೈಷಿಗಳ ಹಿತ ಹಾಗೂ ಠೇವಣಿಗಳ ರಕ್ಷಣೆ ಮಾಡುವುದೇ ತನ್ನ ಉದ್ದೇಶ ಎಂದು ತಸ್ಲೀಂ ಅಕ್ತರ್ ತಿಳಿಸಿದರು.
- ಡಿ.ಎಂ.ಆರ್.