ಹೋಂ ಐಸೊಲೇಷನ್‌ನಲ್ಲಿದ್ದ ೨೨ ಮಂದಿ ಕೋವಿಡ್ ಸೋಂಕಿತರಿಗೆ ೬ ಆಂಬ್ಯುಲೆನ್ಸ್ ಮೂಲಕ ಪಿಪಿಇ ಕಿಟ್‌ನೊಂದಿಗೆ ಆಗಮಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ವಾರ್ಡ್ ೨ರಲ್ಲಿ ೭ ಮಂದಿ, ವಾರ್ಡ್ ೯ರಲ್ಲಿ ೨ ಮಂದಿ, ವಾರ್ಡ್ ೮ರಲ್ಲಿ ೧, ವಾರ್ಡ್ ೬ರಲ್ಲಿ ೧, ವಾರ್ಡ್ ೫ರಲ್ಲಿ ೫, ವಾರ್ಡ್ ೨೩ರಲ್ಲಿ ೨, ವಾರ್ಡ್ ೧ರಲ್ಲಿ ೨, ವಾರ್ಡ್ ೧೯ರಲ್ಲಿ ೨ ಮಂದಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ದೂರವಾಣಿ ಮೂಲಕ ಅವರುಗಳನ್ನು ಸಂಪರ್ಕಿಸಿ ಕರೆತರಲಾಯಿತು. ಕೋವಿಡ್ ಸೋಂಕಿತ ಮತದಾರರು ಪಿಪಿಇ ಕಿಟ್ ದರಿಸಿದ್ದರಿಂದ ಅವರುಗಳ ಬೆರಳಿಗೆ ಇಂಕ್ ಹಾಕಲಿಲ್ಲ. ಕೇವಲ ಸಹಿ ಪಡೆದು ಮತ ಚಲಾಯಿಸಲು ಅವಕಾಶ ನೀಡಲಾಯಿತು.