ಮಡಿಕೇರಿ, ಏ. ೨೭: ಕೊಡಗಿನ ರಾಜಧಾನಿ ಮಡಿಕೇರಿ ನಗರಸಭೆಗೆ ಏಳು ವರ್ಷಗಳ ಬಳಿಕ ಇಂದು ಕೊರೊನಾ ಕರಿನೆರಳಿನ ನಡುವೆಯೂ ಚುನಾವಣೆ ನಡೆಯಿತು. ನಗರಸಭೆಯ ೨೩ ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು ೨೬೮೮೬ ಮತದಾರರಲ್ಲಿ ೧೫೮೮೦ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ. ೫೯.೧ರಷ್ಟು ಮತದಾನವಾಗಿದೆ. ೧೩೧೬೬ ಪುರುಷರಲ್ಲಿ ೭೮೮೮ ಮಂದಿ, ೧೩೭೧೮ ಮಹಿಳೆಯರಲ್ಲಿ ೭೯೯೨ ಮಂದಿ ಮತ ಚಲಾಯಿಸಿದರು. ಕೊರೊನಾ ಕರಿನೆರಳಿನ ನಡುವೆಯೆ ನಡೆದ ಚುನಾವಣೆಯಲ್ಲಿ ಕೊರೊನಾ ನಿಯಮಗಳ ಪಾಲನೆಯೊಂದಿಗೆ ನಡೆದ ಮತ ಕದನ ಯಾವುದೇ ಅಬ್ಬರದ ಪ್ರಚಾರ, ಅತ್ಯುತ್ಸಾಹದ ಓಡಾಟ ಇತ್ಯಾದಿಗಳಿಲ್ಲದೆ ಶಾಂತ ರೀತಿಯಲ್ಲಿ ಮುಕ್ತಾಯವಾಯಿತು.

ಬೆಳಿಗ್ಗೆ ೭ ಗಂಟೆಯಿAದ ಪ್ರಾರಂಭವಾದ ಮತದಾನದಲ್ಲಿ ಎಲ್ಲ ಮತಗಟ್ಟೆಯಲ್ಲೂ ಕೂಡ ಮತದಾರರು ಸ್ಯಾನಿಟೈಸ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಗಳಲ್ಲೂ ನರ್ಸ್ಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದು, ಮತದಾರರಿಗೆ ಸ್ಯಾನಿಟೈಸ್ ನೀಡುವುದು, ದೇಹದ ಉಷ್ಣತೆ ಪರೀಕ್ಷಿಸುವ ಕಾರ್ಯವನ್ನು ನಿಭಾಯಿಸಿದರು. ಪೊಲೀಸರು ಕೂಡ ಮತದಾರರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಕಂಡು ಬಂತು. ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಕೂಡ ಮತಗಟ್ಟೆಯ ಒಳಭಾಗದಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆಯಾಗದAತೆ ಎಚ್ಚರ ವಹಿಸಿದ್ದರು. ಇವೆಲ್ಲದರ ನಡುವೆ ಮತದಾರರು ಮಾಸ್ಕ್ ಧರಿಸಿ ಸ್ವಯಂ ಜಾಗ್ರತೆಯೊಂದಿಗೆ ಮತ ಚಲಾವಣೆ ಮಾಡಿದರು.

ಕಂಡುಬಾರದ ಅಬ್ಬರ

ನಗರಸಭೆಗೆ ಈ ಹಿಂದೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ೨೩ ವಾರ್ಡ್ಗಳ ಮತಗಟ್ಟೆಗಳಲ್ಲಿ ಮತ ಬೇಟೆಗಾಗಿ ಅಭ್ಯರ್ಥಿ, ಬೆಂಬಲಿಗರ ಅಬ್ಬರ ಕಂಡು ಬರುತಿತ್ತು. ಆದರೆ ಈ ಬಾರಿ ಕೊರೊನಾ ಆತಂಕದ ನಡುವೆಯೆ ಚುನಾವಣೆ ನಡೆದ ಕಾರಣ ಅಂತಹ ಅಬ್ಬರಗಳು ಕಂಡುಬರಲಿಲ್ಲ. ಮತದಾರರು ಮತಗಟ್ಟೆ ಬಳಿ ಬಂದು ನಿಂತೊಡನೆ ಅವರನ್ನು ಪಕ್ಷದ ಕಾರ್ಯಕರ್ತರುಗಳು ಸುತ್ತುವರೆದು ತಮಗೆ ಮತ ನೀಡುವಂತೆ ಗೋಗರೆಯುವ ದೃಶ್ಯಗಳು ಈ ಬಾರಿ ಇರಲಿಲ್ಲ. ಕೇವಲ ನಮಸ್ಕರಿಸಿ ಮತ ನೀಡಿ ಎಂದು ಮನವಿ ಮಾಡುವುದನ್ನು ಬಿಟ್ಟರೆ ಉಳಿದಂತೆ ಮತದಾರರನ್ನು ಬೂತ್‌ವರೆಗೆ ಜೊತೆಗೆ ಕರೆದುಕೊಂಡು ಹೋಗುವುದಕ್ಕೂ ಅವಕಾಶ ಇರಲಿಲ್ಲ. ಮತಗಟ್ಟೆಗಳಲ್ಲಿ ಇಂತಹ ಯಾವುದೇ ಚಟುವಟಿಕೆಗಳು ನಡೆಯದ ರೀತಿಯಲ್ಲಿ ಖಾಕಿ ಪಡೆ ಎಚ್ಚರ ವಹಿಸಿತ್ತು. ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯವಾಗಿದ್ದರಿಂದ ಮತಗÀಟ್ಟೆಯಿಂದ ನಿರ್ದಿಷ್ಟ ದೂರದಲ್ಲಿ ರಾಜಕೀಯ ಪಕ್ಷಗಳು, ಪಕ್ಷೇತರರು ಮತಯಾಚನೆ ಮಾಡುವ ಸ್ಥಳದಲ್ಲಿಯೂ

(ಮೊದಲ ಪುಟದಿಂದ) ಗುಂಪುಗೂಡಲು ಅವಕಾಶವಿರಲಿಲ್ಲ. ಮಾತ್ರವಲ್ಲದೆ ಇಂತಿಷ್ಟು ಮಂದಿ ಮಾತ್ರ ಮತಯಾಚನಾ ಸ್ಥಳದಲ್ಲಿ ಇರಬೇಕೆಂದು ನಿಯಮ ಇದ್ದ ಕಾರಣ ಪ್ರಚಾರದ ಅಬ್ಬರ ಕಳೆಗುಂದಿತ್ತು. ಬೆರಳೆಣಿಕೆಯ ಮತಗಟ್ಟೆಗಳಲ್ಲಿ ಮಾತ್ರ ಮತದಾರರ ಸರತಿ ಸಾಲು ಕಂಡುಬAತು. ಹೊರತಾಗಿ ಉಳಿದಂತೆ ಮತಗಟ್ಟೆಗಳಲ್ಲಿ ಮತದಾರರು ಜನಸಂದಣಿ ಇಲ್ಲದೆ ನಿರಾಯಾಸವಾಗಿ ಮತ ಚಲಾಯಿಸಿದರು.

ಎರಡು ವಾರ್ಡ್ನಲ್ಲಿ ವಿಳಂಬ

ಕಾನ್ವೆAಟ್ ಶಾಲೆಯ ವಾರ್ಡ್ ೨ ಮತ್ತು ೧೨ರ ಬಸಪ್ಪ ಶಿಶುವಿಹಾರ ಮತಗಟ್ಟೆಯಲ್ಲಿ ಮತ ಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ಮತದಾನ ಅರ್ಧ ಗಂಟೆ ವಿಳಂಬವಾಗಿ ಪ್ರಾರಂಭವಾಯಿತು. ಈ ವೇಳೆ ಅದಾಗಲೇ ಮತದಾನಕ್ಕೆ ಬಂದಿದ್ದ ಮತದಾರರನ್ನು ಹಿಂತಿರುಗದAತೆ ಅಭ್ಯರ್ಥಿಗಳು ಮನವೊಲಿಸುತ್ತಿದ್ದುದು ಕಂಡು ಬಂತು. ಅರ್ಧ ಗಂಟೆಯ ಬಳಿಕ ಮತದಾನ ಸುಸೂತ್ರವಾಗಿ ನಡೆಯಿತು.ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಚುನಾವಣಾ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಕೂಡ ತಮ್ಮ ತಂಡದೊAದಿಗೆ ಮತಗಟ್ಟೆಗಳಲ್ಲಿ ಪರಿಶೀಲನೆ ಮಾಡಿದರು.