ಮಡಿಕೇರಿ, ಏ. ೨೬: ವಿಶೇಷ ಚೇತನೆಯಿಂದ ಲಂಚದ ಹಣ ಪಡೆಯುತ್ತಿದ್ದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ಅನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಮಡಿಕೇರಿ ತಾಲೂಕು ಅಪ್ಪಂಗಳ ಬೆಟ್ಟಗೇರಿ ಗ್ರಾಮದ ವಿಶೇಷ ಚೇತನೆ ವೀಣಾ ಅವರು ಜಿಲ್ಲಾ ಅಂಗವಿಕಲ ಸಬಲೀಕರಣ ಇಲಾಖೆಯಿಂದ ನೀಡುವ ಉಚಿತ ದ್ವಿಚಕ್ರ ವಾಹನಕ್ಕೆ ಮಾರ್ಚ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದರು. ತಾ. ೨೦ ರಂದು ಅಂಗವಿಕಲ ಕಲ್ಯಾಣಾಧಿಕಾರಿ ಅಧಿಕಾರಿ ಸಂಪತ್ ಕುಮಾರ್ ಅವರು ಕಚೇರಿಗೆ ಬಂದು ಭೇಟಿ ಮಾಡುವಂತೆ ತಿಳಿಸಿದ್ದು, ಅದರಂತೆ

(ಮೊದಲ ಪುಟದಿಂದ) ವೀಣಾ ಕಚೇರಿಗೆ ಭೇಟಿ ಮಾಡಿದಾಗ ಹಾಗೇ ಸುಮ್ಮನೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಸೇರಿಸಲಾಗುವುದಿಲ್ಲ. ರಿಜಿಸ್ಟೆçÃಷನ್ ಖರ್ಚು ನೀಡಬೇಕೆಂದು ಹೇಳಿ ರೂ. ೧೨ ಸಾವಿರ ಹಣಕ್ಕೆ ಅಧಿಕಾರಿ ಬೇಡಿಕೆ ಇಟ್ಟು, ಮುಂಗಡವಾಗಿ ವೀಣಾ ನೀಡಿದ ರೂ ೩ ಸಾವಿರ ಹಣವನ್ನು ಪಡೆದುಕೊಂಡು ಉಳಿದ ರೂ. ೯ ಸಾವಿರ ಹಣವನ್ನು ತಾ. ೨೬ ರಂದು ನೀಡಬೇಕೆಂದು ಹೇಳಿದ್ದಾನೆ. ನಂತರ ಲಂಚದ ಬೇಡಿಕೆ ವಿಚಾರವಾಗಿ ವೀಣಾ ಎಸಿಬಿ ಠಾಣೆಗೆ ಗಣಕೀಕೃತ ದೂರು ನೀಡಿದ ಮೇರೆ ಕೊಡಗು ಜಿಲ್ಲಾ ಎ.ಸಿ.ಬಿ. ಪೊಲೀಸ್ ಠಾಣೆಯಲ್ಲಿ ಕಲಂ: ೭(ಎ) ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಬಳಿಕ ದಾಳಿ ನಡೆಸಿ ಆರೋಪಿತ ಅಧಿಕಾರಿ ರೂ. ೯ ಸಾವಿರ ಲಂಚದ ಹಣವನ್ನು ಸ್ವೀಕರಿಸುವ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ.

ಭ್ರಷ್ಟಾಚಾರ ನಿಗ್ರಹದಳದ ದಕ್ಷಿಣ ವಲಯ, ಮೈಸೂರಿನ ಪೊಲೀಸ್ ಅಧೀಕ್ಷಕರಾದ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಭಾರ ಪೊಲೀಸ್ ಉಪಾಧೀಕ್ಷಕ ಸದಾನಂದ ಎ ತಿಪ್ಪಣ್ಣವರ, ಪೊಲೀಸ್ ನಿರೀಕ್ಷಕರು ಹರೀಶ್ ಸೇರಿದಂತೆ ಸಿಬ್ಬಂದಿಗಳಿದ್ದರು.