ಬೆಂಗಳೂರು, ಏ. ೨೬: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಅಲೆ ಸುನಾಮಿ ರೀತಿಯಲ್ಲಿ ಅಪ್ಪಳಿಸುತ್ತಿರುವ ಪರಿಣಾಮ ರಾಜ್ಯ ಸರಕಾರ ಬಿಗಿಕ್ರಮದ ಮೊರೆ ಹೋಗಿದ್ದು, ತಾ. ೨೭ ರಿಂದ (ಇಂದಿನಿAದ) ರಾತ್ರಿಯಿಂದ ಮುಂದಿನ ೧೪ ದಿನಗಳ ಕೋವಿಡ್ ಕರ್ಫ್ಯೂ ಜಾರಿ ಮಾಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ತಾ. ೨೬ ರಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ೧೫ ದಿನದ ಬಳಿಕವೂ ಪರಿಸ್ಥಿತಿ ಮತ್ತೆ ಹತೋಟಿಗೆ ಬಾರದಿದ್ದಲ್ಲಿ ಮತ್ತೆ ಕರ್ಫ್ಯೂ ಬೆಂಗಳೂರು, ಏ. ೨೬: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಅಲೆ ಸುನಾಮಿ ರೀತಿಯಲ್ಲಿ ಅಪ್ಪಳಿಸುತ್ತಿರುವ ಪರಿಣಾಮ ರಾಜ್ಯ ಸರಕಾರ ಬಿಗಿಕ್ರಮದ ಮೊರೆ ಹೋಗಿದ್ದು, ತಾ. ೨೭ ರಿಂದ (ಇಂದಿನಿAದ) ರಾತ್ರಿಯಿಂದ ಮುಂದಿನ ೧೪ ದಿನಗಳ ಕೋವಿಡ್ ಕರ್ಫ್ಯೂ ಜಾರಿ ಮಾಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ತಾ. ೨೬ ರಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ೧೫ ದಿನದ ಬಳಿಕವೂ ಪರಿಸ್ಥಿತಿ ಮತ್ತೆ ಹತೋಟಿಗೆ ಬಾರದಿದ್ದಲ್ಲಿ ಮತ್ತೆ ಕರ್ಫ್ಯೂ ಸುತ್ತಮುತ್ತ ಜಾಸ್ತಿಯಾಗುತ್ತಿದೆ. ಸಚಿವ ಸಂಪುಟದ ಸಹೋದ್ಯೋಗಿಗಳು, ತಜ್ಞರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಕ್ಕೆ ಬರಲಾಗಿದೆ ಎಂದು ಸಭೆ ಬಳಿಕ ಬಿ.ಎಸ್. ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ೧೮ ರಿಂದ ೪೫ ವಯಸ್ಸಿನೊಳಗಿರುವವರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಉಳಿದಂತೆ ರಾಜ್ಯದಲ್ಲಿ ಎಂದಿನAತೆ ಕರ್ಫ್ಯೂ ಮುಂದುವರೆಯಲಿದೆ. ಗಾರ್ಮೆಂಟ್ಸ್ ನೌಕರರನ್ನು ಹೊರತುಪಡಿಸಿ, ಉತ್ಪಾದನಾ, ಕ್ಷೇತ್ರ, ಕೃಷಿ, ಕಟ್ಟಡ ವೈದ್ಯಕೀಯ ಚಟುವಟಿಕೆಗಳು ಎಂದಿನAತೆ ಮುಂದುವರೆಯುತ್ತದೆ.
ತಾಲೂಕು ಅಧಿಕಾರಿಗಳು ಬಿಗಿ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಆಕ್ಸಿಜನ್ ೮೦೦ ಮೆಟ್ರಿಕ್ ಟನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಸರಕು- ಸಾಗಾಣಿಕೆ ವಾಹನಗಳಿಗೆ ಮಾತ್ರ ಈ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಏನಿರುತ್ತೆ : ನಿಗದಿತ ಬೆಳಿಗ್ಗೆ ೬ ರಿಂದ ೧೦ ಗಂಟೆ ಕಾಲಾವಧಿಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಹಣ್ಣು, ಹಾಲು, ದಿನಪತ್ರಿಕೆ ಖರೀದಿಗೆ ಅವಕಾಶ ನೀಡಲಾಗಿದ್ದು, ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದ ಕೈಗಾರಿಕ, ಉತ್ಪಾದನ ವಲಯ ತೆರೆಯಲು ವಿನಾಯಿತಿ ನೀಡಲಾಗಿದೆ. ಉಳಿದಂತೆ ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ನಿಗದಿತ ಸಮಯದಲ್ಲಿ ಹಾಲು, ಪತ್ರಿಕೆ, ಮಾಂಸ, ಮೀನಿನ ಮಾರಾಟ ಮಳಿಗೆ ತೆರೆಯಲು ಅವಕಾಶ ದೊರೆಯಲಿದೆ. ಕಟ್ಟಡ ನಿರ್ಮಾಣಕ್ಕೆ, ಕೃಷಿ ವಲಯ, ಹಾರ್ಡ್ವೇರ್ ಶಾಪ್ಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಫೋಟೋಗ್ರಾಫರ್, ಬಾಣಸಿಗರು ಸೇರಿದಂತೆ ೫೦ ಮಂದಿ
(ಮೊದಲ ಪುಟದಿಂದ) ನಡುವೆ ಪೂರ್ವ ನಿಗದಿ ವಿವಾಹ ಸಮಾರಂಭ ನಡೆಸಬಹುದಾಗಿದೆ. ರಾಜ್ಯದೊಳಗೆ ಗೂಡ್ಸ್ ವಾಹನ ಓಡಾಟ ಎಂದಿನAತೆ ಇರಲಿದೆ. ಅಂತರರಾಜ್ಯ ಸರಕು ಸಾಗಾಣೆ ವಾಹನಕ್ಕೆ ನಿರ್ಬಂಧ. ನಿಗದಿತ ಸಮಯದಲ್ಲಿ ಹೊಟೇಲ್ ಹಾಗೂ ಬಾರ್ನಲ್ಲಿ ಪಾರ್ಸಲ್ಗೆ ಅವಕಾಶ ಇದೆ. ಕಟ್ಟಡ, ಅಭಿವೃದ್ಧಿ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಅಂಚೆ ಕಚೇರಿ, ಬ್ಯಾಂಕ್, ಟೆಲಿಕಾಂ, ಎಟಿಎಂ, ತುರ್ತು ಸಂದರ್ಭ ಟ್ಯಾಕ್ಸಿ, ಆಟೋ, ಕ್ಯಾಬ್ ಸಂಚಾರ, ಹೋಂ ಡೆಲಿವರಿ, ಆರೋಗ್ಯ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಉಪನೋಂದಾವಣೆ ಕಚೇರಿ, ಖಜಾನೆ, ಅರಣ್ಯ ಇಲಾಖೆ ಎಂದಿನAತೆ ಇರಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎಡ್ಮಿಷನ್ ಟಿಕೆಟ್ ತೋರಿಸಿ ಆಟೋ, ಟ್ಯಾಕ್ಸಿಗಳಲ್ಲಿ ಸಂಚಾರ ಮಾಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಅಂರ್ರಾಜ್ಯ ಸಂಚಾರಕ್ಕೆ ಅವಕಾಶ.
ಏನಿರಲ್ಲ : ತಾ. ೨೭ರ ರಾತ್ರಿಯಿಂದ ಮುಂದಿನ ೧೪ ದಿನಗಳ ಕಾಲ ರಾಜ್ಯಾದ್ಯಂತ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗೆ ರಾಜ್ಯ ಸರಕಾರ ನಿರ್ಬಂಧ ವಿಧಿಸಿದೆ. ಮೆಟ್ರೋ, ಬಸ್, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದೆ. ಇದರೊಂದಿಗೆ ತರಕಾರಿ, ದಿನಸಿ ಸೇರಿದಂತೆ ದಿನೋಪಯೋಗಿ ವಸ್ತು ಮಾರಾಟವಲ್ಲದೆ ಇನ್ನಿತರ ಎಲ್ಲಾ ರೀತಿಯ ಮಳಿಗೆಗಳು ಬಂದ್ ಆಗಲಿವೆ. ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನರಂಜನಾ ಕಾರ್ಯಕ್ರಮಗಳು, ದೇವಾಲಯ, ಚರ್ಚ್ ಮತ್ತು ಮಸೀದಿಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಿನಿಮಾ ಹಾಲ್, ಶಾಪಿಂಗ್ ಮಾಲ್, ಯೋಗ ಕೇಂದ್ರ, ಜಿಮ್, ಬ್ಯೂಟಿ ಪಾರ್ಲರ್, ಸಲೂನ್, ಶಾಲಾ-ಕಾಲೇಜು ಬಂದ್ ಮುಂದುವರೆಯಲಿದೆ. ತುರ್ತು ಸಂದರ್ಭ ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ರೈತರಿಗೆ ಗ್ರೀನ್ ಪಾಸ್: ಕೃಷಿ ವಲಯಕ್ಕೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆ ರೈತರಿಗೆ ಗ್ರೀನ್ ಪಾಸ್ ವಿತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೃಷಿ ಉತ್ಪನ್ನ ಸಾಗಿಸಲು ಈ ಪಾಸ್ ಬಳಸಿಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.