ಮಡಿಕೇರಿ, ಏ. ೨೬: ಏಳು ವರ್ಷಗಳ ಬಳಿಕ ನಿಗದಿಯಾಗಿರುವ ಪ್ರತಿಷ್ಠಿತ ನಗರಸಭಾ ಚುನಾವಣೆ ತಾ. ೨೭ ರಂದು (ಇಂದು) ಬೆಳಿಗ್ಗೆ ೭ ರಿಂದ ಸಂಜೆ ೬ ರವರೆಗೆ ನಡೆಯಲಿದೆ. ಒಟ್ಟು ೨೩ ವಾರ್ಡ್ಗಳಿಗೆ ಚುನಾವಣೆ ನಿಗದಿಯಾಗಿದ್ದು, ೧೩,೧೬೬ ಪುರುಷರು, ೧೩,೭೧೮ ಮಹಿಳೆಯರು ಹಾಗೂ ಇತರೆ ೨ ಸೇರಿದಂತೆ ಒಟ್ಟು ೨೬೮೮೬ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಬಿಜೆಪಿಯಿಂದ ೨೩, ಕಾಂಗ್ರೆಸ್‌ನಿAದ ೨೩, ಜೆಡಿಎಸ್‌ನಿಂದ ೨೨, ಎಸ್‌ಡಿಪಿಐನಿಂದ ೯, ಆಮ್‌ಆದ್ಮಿ ಪಕ್ಷದಿಂದ ೪ ಹಾಗೂ ಪಕ್ಷೇತರರಾಗಿ ೨೭ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಚುನಾವಣೆ ಹಿನ್ನೆಲೆ ಜಿಲ್ಲಾಡಳಿತದಿಂದ ಪೂರ್ವಸಿದ್ಧತಾ ಕಾರ್ಯಗಳು ಪೂರ್ಣಗೊಂಡಿದೆ.

ವಾರ್ಡ್ ನಂ ೧ ವಿದ್ಯಾನಗರ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ನಂ. ೨ ಕಾವೇರಿ ಬಡಾವಣೆ ವ್ಯಾಪ್ತಿಯಲ್ಲಿ ೧೧ ಮಂದಿ, ವಾರ್ಡ್ ೩ ಗದ್ದಿಗೆ ವ್ಯಾಪ್ತಿಯಲ್ಲಿ ೩ ಮಂದಿ, ವಾರ್ಡ್ ೪

(ಮೊದಲ ಪುಟದಿಂದ) ಆಜಾದ್‌ನಗರ ವ್ಯಾಪ್ತಿಯಲ್ಲಿ ೫ ಮಂದಿ, ವಾರ್ಡ್ ೫ ದೇಚೂರು ವ್ಯಾಪ್ತಿಯಲ್ಲಿ ೩ ಮಂದಿ, ವಾರ್ಡ್ ೬ ಕನ್ನಂಡಬಾಣೆ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ೭ ಗಣಪತಿ ಬೀದಿ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ೮ ಮಹದೇವಪೇಟೆ ವ್ಯಾಪ್ತಿಯಲ್ಲಿ ೫ ಮಂದಿ, ವಾರ್ಡ್ ೯ ಅಂಬೇಡ್ಕರ್ ಬಡಾವಣೆ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ೧೦ ಕನಕದಾಸ ರಸ್ತೆ ವ್ಯಾಪ್ತಿಯಲ್ಲಿ ೭ ಮಂದಿ, ವಾರ್ಡ್ ೧೧ ಭಾಗಶಃ ಗಣಪತಿ ಬೀದಿ ವ್ಯಾಪ್ತಿಯಲ್ಲಿ ೬ ಮಂದಿ, ವಾರ್ಡ್ ೧೨ ದಾಸವಾಳ ರಸ್ತೆ ವ್ಯಾಪ್ತಿಯಲ್ಲಿ ೫ ಮಂದಿ, ವಾರ್ಡ್ ೧೩ ಪುಟಾಣಿ ನಗರ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ೧೪ ಜಯನಗರ ವ್ಯಾಪ್ತಿಯಲ್ಲಿ ೩ ಮಂದಿ, ವಾರ್ಡ್ ೧೫ ಭಾಗಶಃ ರೇಸ್‌ಕೋರ್ಸ್ ರಸ್ತೆ ವ್ಯಾಪ್ತಿಯಲ್ಲಿ ೩ ಮಂದಿ, ವಾರ್ಡ್ ೧೬ ಗೌಳಿಬೀದಿ ರಸ್ತೆ ವ್ಯಾಪ್ತಿಯಲ್ಲಿ ೩ ಮಂದಿ, ವಾರ್ಡ್ ೧೭ ಕಾನ್ವೆಂಟ್ ರಸ್ತೆ ವ್ಯಾಪ್ತಿಯಲ್ಲಿ ೬ ಮಂದಿ, ವಾರ್ಡ್ ೧೮ ಭಾಗಶಃ ಹೊಸಬಡಾವಣೆ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ೧೯ ಸುಬ್ರಮಣ್ಯ ನಗರ ವ್ಯಾಪ್ತಿಯಲ್ಲಿ ೬ ಮಂದಿ, ವಾರ್ಡ್ ೨೦ ಜ್ಯೋತಿನಗರ ವ್ಯಾಪ್ತಿಯಲ್ಲಿ ೪ ಮಂದಿ, ವಾರ್ಡ್ ೨೧ ಚಾಮುಂಡೇಶ್ವರಿ ನಗರ ವ್ಯಾಪ್ತಿಯಲ್ಲಿ ೫ ಮಂದಿ, ವಾರ್ಡ್ ೨೨ ಮಂಗಳಾದೇವಿ ನಗರ ವ್ಯಾಪ್ತಿಯಲ್ಲಿ ೫ ಮಂದಿ ಹಾಗೂ ವಾರ್ಡ್ ೨೩ ಅಶೋಕಪುರ ವ್ಯಾಪ್ತಿಯಲ್ಲಿ ೪ ಮಂದಿ ಚುನಾವಣೆ ಸ್ಪರ್ಧಿಸಿದ್ದಾರೆ. ಸುಮಾರು ೨೨ ಮಂದಿ ಮಾಜಿಗಳು ಪ್ರಸ್ತುತ ಕಣದಲ್ಲಿದ್ದು, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಉಳಿದಂತೆ ಹೊಸಮುಖಗಳು ಚುನಾವಣೆ ಕಣಕ್ಕೆ ಧುಮುಕಿವೆ. ಈ ಪೈಕಿ ಓರ್ವ ಮಂಗಳಮುಖಿ ಕೂಡ ಸ್ಪರ್ಧಿಸಿರುವುದು ವಿಶೇಷ.

ಮತಗಟ್ಟೆಗಳ ವಿವರ

೧ನೇ ವಾರ್ಡ್ಗೆ ಎಫ್‌ಎಂಸಿ ಕಾಲೇಜು ಬಲಪಾರ್ಶ್ವ, ೨ನೇ ವಾರ್ಡ್ಗೆ ಸಂತಜೋಸೆಫರ ಕಾನ್ವೆಂಟ್ ಬಲಪಾರ್ಶ್ವ, ೩ನೇ ವಾರ್ಡ್ಗೆ ನಗರಸಭೆ ಹಿರಿಯ ಪ್ರಾ. ಶಾಲೆ ಮಹದೇವಪೇಟೆ ದಕ್ಷಿಣಪಾರ್ಶ್ವ, ೪ನೇ ವಾರ್ಡ್ಗೆ ಕರ್ನಾಟಕ ಕೋ ಆಪ್ ಮ್ಯಾನೆಜ್‌ಮೆಂಟ್ ಕಚೇರಿ ಎಡಪಾರ್ಶ್ವ ಹಾಗೂ ಬಲಪಾರ್ಶ್ವ, ವಾರ್ಡ್ ೫ ಕ್ಕೆ ಸರ್ಕಾರಿ ಕಿರಿಯ ಕಾಲೇಜು ಬಲಪಾರ್ಶ್ವ, ೬ನೇ ವಾರ್ಡ್ಗೆ ಸರ್ಕಾರಿ ಕಿರಿಯ ಕಾಲೇಜು ಬಲ ಹಾಗೂ ಎಡಪಾರ್ಶ್ವ, ೭ನೇ ವಾರ್ಡ್ಗೆ ನಗರಸಭೆ ಕಿರಿಯ ಪ್ರಾ. ಶಾಲೆ ಮಹದೇವಪೇಟೆ ಬಲಪಾರ್ಶ್ವ, ೮ನೇ ವಾರ್ಡ್ಗೆ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ ಮಹದೇವಪೇಟೆ ಉತ್ತರ ಪಾರ್ಶ್ವ, ೯ನೇ ವಾರ್ಡ್ಗೆ ಸಂತ ಜೋಸೆಫರ ಕಾನ್ವೆಂಟ್ ಮಧ್ಯಪಾರ್ಶ್ವ, ೧೦ನೇ ವಾರ್ಡ್ಗೆ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ ಹಿಲ್ ರಸ್ತೆ ಬಲಪಾರ್ಶ್ವ, ೧೧ನೇ ವಾರ್ಡ್ಗೆ ನಗರಸಭಾ ಹಿರಿಯ ಪ್ರಾ. ಶಾಲೆ ಹಿಲ್ ರಸ್ತೆ ಎಡಪಾರ್ಶ್ವ, ೧೨ನೇ ವಾರ್ಡ್ಗೆ ಬಸಪ್ಪ ಶಿಶು ವಿಹಾರ ಕಟ್ಟಡ, ೧೩ನೇ ವಾರ್ಡ್ಗೆ ಬ್ಲಾಸಂ ಆಂಗ್ಲ ಮಾದ್ಯಮ ಶಾಲೆ ಎಡಪಾರ್ಶ್ವ, ೧೪ನೇ ವಾರ್ಡ್ಗೆ ನಗರಸಭಾ ಹಿರಿಯ ಪ್ರಾ. ಶಾಲೆ ಎಡಪಾರ್ಶ್ವ, ೧೫ನೇ ವಾರ್ಡ್ಗೆ ನಗರಸಭಾ ಕಚೇರಿ ಕಟ್ಟಡ ಬಲ ಹಾಗೂ ಎಡಪಾರ್ಶ್ವ, ೧೬ನೇ ವಾರ್ಡ್ಗೆ ಜಿಲ್ಲಾ ತೋಟಗಾರಿಕಾ ಕಚೇರಿ ಕಟ್ಟಡ, ೧೭ನೇ ವಾರ್ಡ್ಗೆ ಸಂತ ಜೋಸೆಫರ ಕಾನ್ವೆಂಟ್ ಉತ್ತರ ಪಾರ್ಶ್ವ, ೧೮ನೇ ವಾರ್ಡ್ಗೆ ಸಂತಮೈಕಲರ ಪ್ರೌಢಶಾಲೆ ಎಡಪಾರ್ಶ್ವ, ೧೯ನೇ ವಾರ್ಡ್ಗೆ ಎಫ್‌ಎಂಸಿ ಕಾಲೇಜು ಎಡಪಾರ್ಶ್ವ, ೨೦ನೇ ವಾರ್ಡ್ಗೆ ಸಂತಮೈಕಲರ ಪ್ರೌಢಶಾಲೆ ಮಧ್ಯಪಾರ್ಶ್ವ ಹಾಗೂ ಉತ್ತರ ಪಾರ್ಶ್ವ, ೨೧ನೇ ವಾರ್ಡ್ಗೆ ಸಂತ ಮೈಕಲರ ಪ್ರೌಢಶಾಲೆ ದಕ್ಷಿಣ ಪಾರ್ಶ್ವ, ೨೨ನೇ ವಾರ್ಡ್ಗೆ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ ಜಿ.ಟಿ. ರಸ್ತೆ ಬಲಪಾರ್ಶ್ವ, ೨೩ನೇ ವಾರ್ಡ್ಗೆ ತಾಲೂಕು ಪಂಚಾಯಿತಿ ಕಚೇರಿ. ಮತಗಟ್ಟೆಗಳನ್ನು ಸಿದ್ದಗೊಳಿಸಲಾಗಿದೆ. ಒಟ್ಟು ೨೩ ಮತಗಟ್ಟೆಗಳಿದ್ದು, ೧೪೦೦ಕ್ಕೂ ಅಧಿಕ ಮತದಾರರಿರುವ ೪ ವಾರ್ಡ್ಗಳಲ್ಲಿ ಹೆಚ್ಚುವರಿಯಾಗಿ ಒಂದೊAದು ಮತಗಟ್ಟೆಗಳನ್ನು ತೆರೆಯಲಾಗಿದೆ. ೧೮ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದ್ದು, ೬ ಸೂಕ್ಷö್ಮ ಹಾಗೂ ೩ ಅತಿಸೂಕ್ಷö್ಮ ಮತಗಟ್ಟೆಗಳಾಗಿವೆ.