ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಏ. ೨೫: ಹಾಕಿ ಇಂಡಿಯಾ ಮೂಲಕ ರಾಷ್ಟಿçÃಯ ಹಾಕಿ ಪಂದ್ಯಾವಳಿಗಳಲ್ಲಿ ಪ್ರತ್ಯೇಕ ಕೊಡಗು ತಂಡವಾಗಿ ಆಡುವ ಅವಕಾಶ ಹೊಂದಿದ್ದ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಇದೀಗ ಹಲವು ಅವಕಾಶಗಳಿಂದ ವಂಚಿತರಾಗಿದ್ದಾರೆ. ಕೆಲ ವರ್ಷದಿಂದ ಹಾಕಿ ಇಂಡಿಯಾ ‘ಹಾಕಿ ಕೂರ್ಗ್’ಗೆ ರಾಷ್ಟಿçÃಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅಧಿಕೃತ ಮಾನ್ಯತೆ ನೀಡಿತ್ತು. ಈ ಅವಕಾಶದಿಂದ ಕೊಡಗಿನ ಕ್ರೀಡಾಪಟುಗಳು ಹಲವು ವಿಭಾಗದ ರಾಷ್ಟಿçÃಯ ಪಂದ್ಯಾವಳಿಗಳಲ್ಲಿ ಪ್ರತ್ಯೇಕ ತಂಡವಾಗಿ ಭಾಗವಹಿಸಿ ರಾಷ್ಟçಮಟ್ಟದಲ್ಲೂ ಸಾಧನೆ ತೋರಿತ್ತು. ಆದರೆ ಕಲ ಸಮಯದ ಹಿಂದೆ ಆಡಳಿತಾತ್ಮಕ ಕಾರಣದಿಂದಾಗಿ ಹಾಕಿ ಇಂಡಿಯಾ ಹಾಕಿ ಕೂರ್ಗ್, ಹಾಕಿ ಬೆಂಗಳೂರು ಸೇರಿದಂತೆ ರಾಷ್ಟçದ ಹಲವು ತಂಡಗಳಿಗೆ ನೀಡಿದ್ದ ಈ ಮಾನ್ಯತೆಯನ್ನು ರದ್ದುಗೊಳಿಸಿ ಒಂದು ರಾಜ್ಯದಿಂದ ಕೇವಲ ಒಂದೇ ತಂಡ ರಾಷ್ಟಿçÃಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ತೀರ್ಮಾನವನ್ನು ಕೈಗೊಂಡಿದೆ. ಈ ತೀರ್ಮಾನವನ್ನು ಹಿಂಪಡೆದು ಮಾನ್ಯತೆ ಮುಂದುವರಿಸುವ ಬೇಡಿಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಇದರಿಂದ ವಾರ್ಷಿಕವಾಗಿ ವಿವಿಧ ವಿಭಾಗಗಳಲ್ಲಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುತ್ತಿದ್ದ ಸುಮಾರು ೯೦ರಷ್ಟು ಕ್ರೀಡಾಪಟುಗಳಿಗೆ ನಿರಾಶೆಯಾಗಿದೆ. ಹಾಕಿ ಕೂರ್ಗ್ ಸಂಸ್ಥೆ ಹಾಗೂ ಕ್ರೀಡಾಪ್ರೇಮಿಗಳಿಗೂ ಇದು ನಿರಾಶೆ ಮೂಡಿಸಿದಂತಾಗಿದೆ.

ಕ್ರೀಡೆಯ ತವರೂರು ಕೊಡಗು ಜಿಲ್ಲೆಯಿಂದ ತೆರಳಿ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರುಗಳಿಸುವ ಮೂಲಕ ಹಾಕಿ ಕ್ರೀಡೆಯಲ್ಲಿ ಕೊಡಗು ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಅಸಂಖ್ಯಾತ ಹಾಕಿ ಕ್ರೀಡಾಪಟುಗಳಿಗೆ ಇದೀಗ ಕೊಡಲಿ ಪೆಟ್ಟು ಬಿದ್ದಿದೆ.

ಈ ಹಿಂದೆ ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಹಾಕಿ ಬೆಂಗಳೂರು ಮೂಲಕ ಕ್ರೀಡಾಪಟುಗಳು ಆಯ್ಕೆಯಾಗುತ್ತಿದ್ದರು.

(ಮೊದಲ ಪುಟದಿಂದ) ಆದರೆ ಕೆಲವು ಸಮಯದಿಂದ ಹಾಕಿ ಕೂರ್ಗ್ ಹಾಗೂ ಹಾಕಿ ಬೆಂಗಳೂರು ಈ ಎರಡು ಪ್ರಮುಖ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಿ ಹಾಕಿ ಕರ್ನಾಟಕವನ್ನು ಮಾತ್ರ ಉಳಿಸಿಕೊಂಡಿದೆ. ಹಾಕಿ ಕೂರ್ಗ್ ಹಾಗೂ ಹಾಕಿ ಬೆಂಗಳೂರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನೇಕ ಕ್ರೀಡಾಪ್ರತಿಭೆಗಳು ಉತ್ತಮ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂಸ್ಥೆಯ ಮೂಲಕ ಉತ್ತಮ ಪ್ರದರ್ಶನ ನೀಡಿ ರಾಷ್ಟçಮಟ್ಟದಲ್ಲಿ ಯುವ ಪ್ರತಿಭೆಗಳು ಮಿಂಚಿದ್ದರು.

ಹಾಕಿ ಕರ್ನಾಟಕದಲ್ಲಿ ಸ್ಥಾನ ಲಭಿಸದ ಅನೇಕ ಕೊಡಗಿನ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳು ಹಾಕಿ ಕೂರ್ಗ್ ಹಾಗೂ ಹಾಕಿ ಬೆಂಗಳೂರು ಸಂಸ್ಥೆಯ ಮೂಲಕ ಅವಕಾಶ ಪಡೆದು ತಮ್ಮಲ್ಲಿರುವ ಕ್ರೀಡಾಪ್ರತಿಭೆಯನ್ನು ಮೆರೆದಿದ್ದರು. ಇದೀಗ ಈ ಎರಡು ಸಂಸ್ಥೆಗಳಿಗೆ ಮಾನ್ಯತೆ ರದ್ದಾಗಿರುವುದರಿಂದ ವಿಶೇಷವಾಗಿ ಕೊಡಗಿನ ಯುವ ಪ್ರತಿಭೆಗಳ ಕನಸು ಭಗ್ನಗೊಂಡಿದೆ. ಕೊಡಗಿನ ಜನತೆಗೂ ಹಾಕಿ ಕ್ರೀಡೆಗೂ ಅನಿನಾಭಾವ ಸಂಬAಧವಿದ್ದು ಪ್ರತಿ ಮನೆಯಲ್ಲಿಯೂ ಹಾಕಿ ಸ್ಟಿಕ್ ಇಲ್ಲದ ಉದಾಹರಣೆ ಇಲ್ಲ. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗಳಲ್ಲಿ ಕೊಡಗಿನ ಯುವ ಪ್ರತಿಭೆಗಳು ತಮ್ಮ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದವು. ಇದೀಗ ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಕೊಡವ ಕೌಟುಂಬಿಕ ಹಾಕಿ ಕ್ರೀಡೆಗಳು ನಡೆಯುತ್ತಿಲ್ಲ. ಇದರಿಂದಾಗಿ ಹಾಕಿ ಪ್ರೇಮಿಗಳಿಗೆ ನಿರಾಶೆ ಮೂಡಿದಂತಾಗಿದೆ. ಅಲ್ಲದೆ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಸೂಸಲು ಸಾಧ್ಯವಾಗದೆ ಮರುಗುತ್ತಿದ್ದಾರೆ.

ಸಾಯಿ ಸಂಸ್ಥೆಯನ್ನು ಹುಟ್ಟು ಹಾಕಿದÀ ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ.ಪಿ. ಗಣೇಶ್, ಒಲಿಂಪಿಯನ್ ಬಿ.ಕೆ. ಸುಬ್ರಮಣಿ ಹಾಗೂ ಅಂತರಾಷ್ಟಿçÃಯ ಹಾಕಿಪಟು ಬೊವ್ವೇರಿಯಂಡ ಕುಟ್ಟಪ್ಪ ಮತ್ತಿತರ ಹಲವರು ಇದೀಗ ಕೊಡಗಿನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಇವರ ಸಮ್ಮುಖದಲ್ಲಿ ಜಿಲ್ಲೆಯ ಮಾಜಿ ತೀರ್ಪುಗಾರರು, ವೀಕ್ಷಕ ವಿವರಣೆಗಾರರು, ಮಾಜಿ ಯೋಧರು ಒಂದೆಡೆ ಸೇರಿ ಕೊಡಗು ಜಿಲ್ಲೆಯ ಹಾಕಿಗೆ ಮತ್ತೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ಆ ಮೂಲಕ ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯದ ಕದ ತಟ್ಟಬೇಕಾಗಿದೆ. ಕೊಡಗಿನ ಹಾಕಿಯನ್ನು ಉಳಿಸಲು ಹೋರಾಟ ರೂಪುಗೊಳ್ಳದಿದ್ದಲ್ಲಿ ಕೊಡಗಿನ ಹಾಕಿ ಪ್ರತಿಭೆಗಳು ಕಮರಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಿAಚಿದ್ದ ಕೊಡಗಿನ ಕ್ರೀಡಾಪಟುಗಳು

ಎಂ.ಪಿ. ಗಣೇಶ್, ಅಂಜಪರವAಡ ಸುಬ್ಬಯ್ಯ, ಬಿ.ಪಿ. ಗೋವಿಂದ, ಚೆಪ್ಪುಡೀರ ಪೂಣಚ್ಚ, ಬಾಳೆಯಡ ಸುಬ್ರಮಣಿ, ಅರ್ಜುನ್ ಹಾಲಪ್ಪ, ಹರಿಪ್ರಸಾದ್, ವಿನಯ್‌ವಿ.ಎಸ್., ರಘುನಾಥ್, ಎಸ್.ವಿ. ಸುನೀಲ್, ಚೇಂದAಡ ನಿಖಿನ್ ತಿಮ್ಮಯ್ಯ, ಮೇಕೇರಿರ ನಿತಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ, ಪ್ರಧಾನ್ ಸೋಮಣ್ಣ, ಎಂ.ಬಿ. ಅಯ್ಯಪ್ಪ, ವಿಕ್ರಂಕಾAತ್, ಕರಿನೆರವಂಡ ಸೋಮಣ್ಣ ಸೇರಿದಂತೆ ಹಲವಾರು ಕ್ರೀಡಾಪಟುಗಳು ರಾಷ್ಟಿçÃಯ, ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕೊಡಗಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಜನಪ್ರತಿನಿಧಿಗಳ ಮೌನ.!

ಕೊಡಗು ಜಿಲ್ಲೆಗೆ ಸತತವಾಗಿ ಹಿನ್ನಡೆಯಾಗುತ್ತಿದೆ. ಜಿಲ್ಲೆಗೆ ಮಂತ್ರಿ ಸ್ಥಾನಗಳು ಲಭಿಸುತ್ತಿಲ್ಲ. ಜಿಲ್ಲೆಗೆ ಸಂಸದರು ಸಿಗುತ್ತಿಲ್ಲ. ಕಸ್ತೂರಿ ರಂಗನ್, ಬಫÀರ್ ಜೋನ್ ಸೇರಿದಂತೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಇದೀಗ ಜಿಲ್ಲೆಗೆ ಸಿಗುತ್ತಿದ್ದ ಕ್ರೀಡಾ ಪ್ರೋತ್ಸಾಹ ಕೂಡ ಮರೀಚಿಕೆಯಾಗುತ್ತಿದೆ. ಈ ಬಗ್ಗೆ ಧ್ವನಿ ಎತ್ತಬೇಕಾದ ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮೌನವಾಗಿರುವುದು ಕಂಡು ಬಂದಿದೆ.