ಕೂಡಿಗೆ, ಏ. ೨೫: ಕ್ಷÄಲ್ಲಕ ಕಾರಣಕ್ಕೆ ಕೊಡಗಿನ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೋಪಿತ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಶಿವರಾಜ್ (೨೫) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದ ಸರಕಾರಿ ಬಸ್ ಚಾಲಕ ಪುರುಷೋತ್ತಮ್ ಎಂಬವರ ಪುತ್ರ ಪುನೀತ್ ಅಲಿಯಾಸ್ ಸತ್ಯ (೨೬) ಕೊಲೆಯಾದ ಯುವಕ. ಪುನೀತ್ ಬೆಂಗಳೂರಿನ ಮಹದೇವಪುರದ ಕಾವ್ಯ ಪೆಟ್ರೋಲ್ ಬಂಕ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಬಂಕ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಜೊತೆಗಿದ್ದ ಆರೋಪಿ ಶಿವರಾಜ್ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ತಾ. ೨೫ ರಂದು ಪೆಟ್ರೋಲ್ ಬಂಕ್ ಸಮೀಪ ಬಂದು ಊಟ ಕೊಡಿಸುವಂತೆ ಪುನೀತ್ ಬಳಿ ಕೇಳಿದ್ದಾನೆ. ಕೊಡಿಸಲ್ಲ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಶಿವರಾಜ್ ಪುನೀತ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬAಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.