ಬೆಂಗಳೂರು, ಏ. ೨೩: ನಿನ್ನೆ ಬಿಡುಗಡೆ ಮಾಡಲಾಗಿದ್ದ ವನ್ಯ ಪ್ರಾಣಿಗಳಿಂದ ಸಾಕುಪ್ರಾಣಿಗಳು ಸತ್ತರೆ ನೀಡಲಾಗುವ ಪರಿಹಾರ ಸಂಬAಧಿಸಿದ ವನ್ಯಜೀವಿಗಳಿಂದ ಸಾಕುಪ್ರಾಣಿ ಮೃತಪಟ್ಟರೆ ಅದರ ಪರಿಹಾರಧನವನ್ನು ಕನಿಷ್ಟ ೨೦ ಸಾವಿರದಿಂದ ಗರಿಷ್ಠ ೭೫ ಸಾವಿರಕ್ಕೆ ಹೆಚ್ಚಿಸಲು ಹಾಗೂ ಕುರಿ-ಮೇಕೆ ,ಆಡು ಸತ್ತರೆ ಅದರ ಪರಿಹಾರಧನ ೫೦೦೦ ದಿಂದ ೧೦ ಸಾವಿರ ರೂಪಾಯಿಗೆ ಹೆಚ್ಚಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಬAಧಪಟ್ಟAತೆ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸ್ಪಷ್ಟೀಕರಣ ನೀಡಿದೆ.

ಸಾಕು ಪ್ರಾಣಿಗಳಾದ ಹಸು, ಎತ್ತು, ಎಮ್ಮೆ, ಕೋಣ ಮುಂತಾದವುಗಳು ವನ್ಯ ಪ್ರಾಣಿಗಳ ದಾಳಿಯಿಂದ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ನೀಡಲಾಗುತ್ತಿರುವ ಪರಿಹಾರಧನವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿ, ದರಗಳ ಅನ್ವಯ ೨೦೨೧-೨೨ನೇ ಸಾಲಿನಿಂದ ಜಾರಿಗೆ ಬರುವಂತೆ ಪಾವತಿಸಲು ಅನುಮೋದನೆ ನೀಡಿದೆ.

ಸಂತ್ರಸ್ತರಿಗೆ ಪರಿಹಾರ ಮಂಜೂರಾತಿ ಸಂದರ್ಭದಲ್ಲಿ ಸರ್ಕಾರದ ಆದೇಶ ಸಂಖ್ಯೆ ಅಪಜಿ ೧೪೩ ಎಫ್‌ಡಬ್ಲ್ಯೂಎಲ್ ೨೦೧೦ ದಿನಾಂಕ ೩೦.೦೪.೨೦೧೧, ಮತ್ತು ಸರ್ಕಾರ ಆದೇಶ ಸಂಖ್ಯೆ ಅಪಜಿ ೧೪೩ ಎಫ್‌ಡಬ್ಲ್ಯೂಎಲ್ ೨೦೧೦ ದಿನಾಂಕ ೦೩.೦೮.೨೦೧೧ ೨೦೧೧ರಲ್ಲಿ ಇರುವ ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸತಕ್ಕದ್ದು ಎಂದು ಹೇಳಲಾಗಿದೆ.