ನಾಪೋಕ್ಲು, ಏ. ೨೩: ನಾಪೋಕ್ಲು ವಿಭಾಗಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚೆಸ್ಕಾಂ ಇಲಾಖೆಯ ಮೇಲಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕೇಟೋಳಿರ ಹರೀಶ್ ಪೂವಯ್ಯ ಹೇಳಿದರು. ನಾಪೋಕ್ಲು ವಿಭಾಗಕ್ಕೆ ಕಳೆದ ಒಂದು ತಿಂಗಳಿನಿAದ ನಿರಂತರ ವಿದ್ಯುತ್ ಕಣ್ಣು ಮುಚ್ಚಾಲೆಯನ್ನು ಖಂಡಿಸಿ ನಾಪೋಕ್ಲು ವಿಭಾಗದ ನಾಗರಿಕರು ಚೆಸ್ಕಾಂ ಕಚೇರಿಗೆ ತರಳಿ ಪ್ರತಿಭಟಿಸಿದ ಸಂದರ್ಭ ಜೂನಿಯರ್ ಇಂಜಿನಿಯರ್ ದಿನೇಶ್ ಮೇಲಾಧಿಕಾರಿ ಅವರಿಗೆ ಪ್ರತಿಭಟನೆಯ ವಿಷಯವನ್ನು ತಿಳಿಸಿದ್ದು, ಮುಖ್ಯ ಇಂಜಿನಿಯರ್ ಅಶೋಕ್ ಹಾಗೂ ಸಹಾಯಕ ಇಂಜಿನಿಯರ್ ಧನಂಜಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ನಾಪೋಕ್ಲು ಹೋಬಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ನಾಪೋಕ್ಲು ಚೆಸ್ಕಾಂ ಇಲಾಖೆಯ ಕೆಲವು ಸಿಬ್ಬಂದಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದರು. ಇಲಾಖೆಯ ಜೂನಿಯರ್ ಇಂಜಿನಿಯರ್ ದಿನೇಶ್ ಪ್ರತಿಕ್ರಿಯಿಸಿ ಅಂತಹ ಸಿಬ್ಬಂದಿಗಳ ಬಗ್ಗೆ ಕಠಿಣ ಕ್ರಮಕೈಗೊಂಡು ನೋಟೀಸ್ ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಕಂಗಾAಡ ಜಾಲಿ ಪೂವಪ್ಪ, ಪಂಚಾಯಿತಿ ಸದಸ್ಯ ಕನ್ನಂಬೀರ ಸುಧಿ ತಿಮ್ಮಯ್ಯ, ಕುಲ್ಲೇಟಿರ ರಾಜೇಶ್, ಮಾಜಿ ಸೈನಿಕ ಡಾಲ ಅಪ್ಪಚ್ಚ, ಶಿವಚಾಳಿಯಂಡ ಪ್ರಸಾದ್, ರವಿಕುಮಾರ್, ಅರೆಯಡ ಸದ, ಕುಂಡ್ಯೋಳAಡ ವಿಶು, ಬಟ್ಟೀರ ಸಂಜು, ಬಾಳೆಯಡ ಶಂಭು, ಪಾಡಿಯಮ್ಮಂಡ ಜಾಲಿ ಮತ್ತಿತರರು ಇದ್ದರು.

- ದುಗ್ಗಳ.