*ಗೋಣಿಕೊಪ್ಪಲು, ಏ. ೨೩: ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ ವತಿಯಿಂದ ಬೆಸಗೂರು ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಬಾಲ ಕಾರ್ಮಿಕ ಮತ್ತು ಜೀತಪದ್ಧತಿ ಬಗ್ಗೆ ಮಾಹಿತಿ ದೊರೆತಿದೆ.
ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿಯ ಬೆಸಗೂರು ಗ್ರಾಮದಲ್ಲಿ ವಿಶೇಷ ತಂಡ ದಾಳಿ ನಡೆಸಿ ೪ ಮಕ್ಕಳನ್ನು ಜೀತ ಪದ್ಧತಿಯಿಂದ ಮುಕ್ತಿಗೊಳಿಸಿದೆ.
೧೪ ವರ್ಷದ ಒಳಗಿನ ೪ ಮಕ್ಕಳನ್ನು ಜೀತಪದ್ಧತಿಯಿಂದ ಬಿಡಿಸಿ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಉದ್ದೇಶದಿಂದ ಜಿಲ್ಲಾ ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ದಾಳಿ ಸಂದರ್ಭ ಮಾಲೀಕನ ಮನೆಯಲ್ಲಿ ಮೂವರು ಬಾಲಕರು ಮತ್ತು ಒಬ್ಬಳು ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಮಕ್ಕಳನ್ನು ಅಧಿಕಾರಿಗಳು ವಶಕ್ಕೆ ಪಡೆದಾಗ ಮಕ್ಕಳಿ ಗೆ ಸಂಬAಧಪಟ್ಟAತೆ ಯಾವುದೇ ದಾಖಲೆಗಳು ಇರಲಿಲ್ಲ. ಅಲ್ಲದೇ ಪೋಷಕರ ಬಗ್ಗೆಯೂ ಮಕ್ಕಳಿಗೆ ಮಾಹಿತಿ ಇರಲಿಲ್ಲ ಎಂಬವುದು ತಿಳಿದು ಬಂದಿದೆ.
ಜೀತಪದ್ಧತಿಯಿಂದ ಮಕ್ಕಳನ್ನು ಶೋಷಣೆಗೆ ಒಳಪಡಿಸಿದ ಮಾಲೀಕ ನನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ತಹಶೀಲ್ದಾರ್ ಕಾವ್ಯರಾಣಿ ಮಾಹಿತಿ ನೀಡಿ ಕೊಡಗಿನಲ್ಲಿ ಜೀತಪದ್ಧತಿ ಮತ್ತು ಬಾಲಕಾರ್ಮಿಕ ಪದ್ಧತಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಾಲ್ಯ ಹಾಗೂ ಕಿಶೋರ ವ್ಯವಸ್ಥೆ ಯಲ್ಲಿನ ಮಕ್ಕಳನ್ನು ತೋಟಗಳಲ್ಲಿ ಹಾಗೂ ಮನೆಗಳಲ್ಲಿ ಜೀತದಾಳು ಗಳಾಗಿ ದುಡಿಸಿಕೊಂಡು ಮಕ್ಕಳ ಶೋಷಣೆಗೆ ಮುಂದಾಗಿರುವುದು ಬಹುದೊಡ್ಡ ಅಪರಾಧವಾಗಿದೆ.
ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಬೆಸಗೂರು ಗ್ರಾಮದಲ್ಲಿ ದಾಳಿ ನಡೆಸಿ ೪ ಮಕ್ಕಳಿಗೆ ರಕ್ಷಣೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡರೆ ವಾರೆಂಟ್ ರಹಿತವಾಗಿ ಮಾಲೀಕನನ್ನು ಬಂಧಿಸಲಾಗುವುದು. ೨ ವರ್ಷ ಜೈಲು ಶಿಕ್ಷೆ ಹಾಗೂ ೫೦ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ದಾಳಿ ಸಂದರ್ಭ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಜಯಣ್ಣ ಹೆಚ್.ಪಿ., ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಸಿರಾಜ್ ಅಹಮ್ಮದ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯೋಜನಾಧಿಕಾರಿ ಐ.ಎಸ್. ಕಿರಣ್, ಮಕ್ಕಳ ರಕ್ಷಣಾ ವಿಶೇಷ ಪೊಲೀಸ್ ಘಟಕ ಅಧಿಕಾರಿ ಎಂ.ಬಿ. ಸುಮತಿ, ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಕುಮಾರ್, ಸಹಾಯಕ ಉಪಠಾಣಾಧಿಕಾರಿ ಗಣಪತಿ, ಶಿರಸ್ಥೇದಾರ ರಾಧಕೃಷ್ಣ, ಪಿ.ಡಿ.ಓ ಸತೀಶ್‌ಕುಮಾರ್, ಕಂದಾಯ ಪರಿವೀಕ್ಷಕ ಶರೀಫ್ ಹಾಜರಿದ್ದರು.
-ಎನ್.ಎನ್. ದಿನೇಶ್