ಮಡಿಕೇರಿ, ಏ. ೨೩: ಕೊಳಲು ವಾದಕ, ಚಿತ್ರಕಲಾವಿದ, ಶಿಲ್ಪಿ, ಬರಹಗಾರ, ಬೆಂಗಳೂರಿನ ನರಸಿಂಹ ಹೆಗಡೆ ಇಂದು ಕೊರೊನಾ ಸೋಂಕಿನಿAದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅಸುನೀಗಿದರು.

ನರಸಿಂಹ ಹೆಗಡೆ ಈ ಹಿಂದೆ ‘‘ಶಕ್ತಿ’’ಯಲ್ಲಿ ‘ಬ್ಯಾಂಕಿAಗ್ ಹಾಸ್ಯ ಪ್ರಸಂಗ’ ಸರಣಿ ಲೇಖನ ಬರೆದು ಓದುಗರ ಮೆಚ್ಚುಗೆ ಗಳಿಸಿದ್ದರು. ಶಿಲ್ಪಿಯೂ ಆಗಿದ್ದ ಅವರು ಕೊಡಗಿನ ಹಲವು ದೇವಾಯಗಳಿಗೆ ವಿಗ್ರಹಗಳು, ಧ್ವಜಸ್ತಂಭ ಒದಗಿಸಿದ್ದಾರೆ.

ಮೃತರು, ಕವಿ - ಸಾಹಿತಿ ‘‘ಶಕ್ತಿ’’ ಕುಟುಂಬದ ಆಶಾ ಹೆಗಡೆ ಅವರ ಪತಿಯಾಗಿದ್ದು, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಿತು.