ಸಿದ್ದಾಪುರ, ಏ. ೨೩: ಚೆನ್ನಯ್ಯನಕೋಟೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪೊನ್ನಚ್ಚನ ಗಾಯತ್ರಿ ಯತೀಶ್, ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಹೆಚ್.ಆರ್. ಶಿಲ್ಪ ಆಯ್ಕೆಯಾಗಿದ್ದಾರೆ. ಚೆನ್ನಯ್ಯನಕೋಟೆ ಗ್ರಾ.ಪಂ.ಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಗೀತಾ ರವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆ ಕಾರ್ಯ ಶುಕ್ರವಾರದಂದು ನಡೆಯಿತು. ಒಟ್ಟು ೧೬ ಸದಸ್ಯರಿರುವ ಗ್ರಾ.ಪಂ.ಯಲ್ಲಿ ಅಧ್ಯಕ್ಷರ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪೊನ್ನಚ್ಚನ ಗಾಯತ್ರಿ ಯತೀಶ್, ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಆರ್. ಶೀಲಾ ಸ್ಪರ್ಧಿಸಿದ್ದರು. ೧೦ ಮತಗಳನ್ನು ಪಡೆದ ಪೊನ್ನಚ್ಚನ ಗಾಯತ್ರಿ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ೫ ಮತಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಆರ್. ಶೀಲಾ ಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೆಚ್.ಆರ್. ಶಿಲ್ಪ ೯ ಮತಗಳನ್ನು ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಎಂ. ಜಾನಕಿ ೬ ಮತಗಳನ್ನು ಗಳಿಸಿದರು. ಒಂದು ಮತವು ಅಸಿಂಧುವಾಗಿತ್ತು. ಚುನಾವಣಾ ಪ್ರಕ್ರಿಯೆಯನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ನಿರ್ವಹಿಸಿದರು. ಚೆನ್ನಯ್ಯನಕೋಟೆ ಗ್ರಾ.ಪಂ. ಪಿಡಿಓ ಆರ್. ರಾಜನ್ ಹಾಜರಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ.
ಸದಸ್ಯ ಹಾಗೂ ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರಾದ ನೆಲ್ಲೀರ ಚಲನ್, ಜಿಲ್ಲಾ ಖಚಾಂಚಿ ಮಾಚು ಮಾಚಯ್ಯ, ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಮಾಜಿ ತಾ.ಪಂ. ಸದಸ್ಯ ರಾಣಿ ನಾರಾಯಣ, ದಿನೇಶ್, ಗ್ರಾ.ಪಂ. ಸದಸ್ಯರುಗಳಾದ ಮೇಕೇರಿರ ಅರುಣ್, ವಿಜು, ಶಕ್ತಿ ಕೇಂದ್ರದ ಪ್ರಮುಖರಾದ ಅಪ್ಪು, ಶ್ರೀನಿವಾಸ್ ಹಾಗೂ ಬಿಜೆಪಿ ಪಕ್ಷದ ಪುತ್ರ ಪೂಣಚ್ಚ, ರದೀಶ್, ಚುಪ್ಪಣ್ಣ, ಮಾದೇಶ, ಯುವ ಮೋರ್ಚಾ ಅಧ್ಯಕ್ಷ ಕವನ್ ಕಾರ್ಯಪ್ಪ ಇನ್ನಿತರರು ಹಾಜರಿದ್ದರು.