ಮಡಿಕೇರಿ, ಏ. ೨೩: ಮಡಿಕೇರಿ ನಗರಸಭೆ ಚುನಾವಣೆ ಸಂಬAಧ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ತರಬೇತಿ ಕಾರ್ಯಕ್ರಮ ನಡೆಯಿತು.
ಮಾಸ್ಟರ್ ಟ್ರೆöÊನರ್ ಹಾಗೂ ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜೆ. ದಿವಾಕರ ಅವರು ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್, ಮತದಾನ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು.
ತಹಶೀಲ್ದಾರ್ ಮಹೇಶ್ ಅವರು ಮತಯಂತ್ರದ ಮೂಲಕ ಮತದಾನ ನಡೆಯಲಿದೆ ತಾ. ೨೭ ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋವಿಡ್-೧೯ ಪಾಸಿಟಿವ್ ಕಂಡು ಬಂದಿರುವ ಮತದಾರರು ಮತಹಕ್ಕು ಚಲಾಯಿಸುವಂತಾಗಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮತದಾನದಂದು ಸಂಜೆ ೪ ರಿಂದ ೫ ಗಂಟೆ ಅವಧಿಯಲ್ಲಿ ಮತ ಹಕ್ಕು ಚಲಾಯಿಸಬಹುದಾಗಿದೆ ಎಂದು ತಿಳಿಸಿದರು. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ೨೩ ವಾರ್ಡ್ಗಳಿದ್ದು, ೨೬,೬೧೯ ಮತದಾರರಿದ್ದು, ಇವರಲ್ಲಿ ೧೩,೦೧೧ ಪುರುಷ ಮತದಾರರು ಮತ್ತು ೧೩,೬೦೬ ಮಹಿಳಾ ಮತದಾರರು ಇದ್ದಾರೆ. ಇತರ ೨ ಮತದಾರರು ಇದ್ದಾರೆ ಎಂದು ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದರು. ಚುನಾವಣಾ ವಿಭಾಗದ ವೆಂಕಟೇಶ್ ಇತರರು ಇದ್ದರು.