ಶ್ರೀಮAಗಲ, ಏ. ೨೩: ಕೊಡವ ಭಾಷೆಯ ಹಾಡುಗಾರ್ತಿ ಲತಾ ಮಂಗೇಶ್ಕರ್ ಎಂದೇ ಖ್ಯಾತಿ ಹೊಂದಿದ್ದ ಗಾನ ಕೋಗಿಲೆ ತೋಲಂಡ ಪ್ರಭಾ ಚಂಗಪ್ಪ ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟಿರುವುದು ಕೊಡವ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರನ್ನು ನೆನೆಸಿಕೊಳ್ಳುವ ಸಲುವಾಗಿ ಅವರಿಗೆ ವಿಶೇಷ ರೀತಿಯ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಂಬAಧ ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ವೀರಾಜಪೇಟೆಯ ತೂಕ್‌ಬೊಳಕ್, ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಮೇ ೨ ರಂದು ಪೂರ್ವಾಹ್ನ ೧೦ ಗಂಟೆಗೆ ವೀರಾಜಪೇಟೆ ಪುರಭವನದಲ್ಲಿ ಪ್ರಭಾ ಚಂಗಪ್ಪ ಅವರು ಹಾಡಿರುವ ಹಾಡುಗಳದ್ದೇ ಪೈಪೋಟಿ ನಡೆಸಿ ಆ ಮೂಲಕ ತನ್ನ ಹಾಡಿನಿಂದಲೇ ಗಾನ ಕೋಗಿಲೆ ಪ್ರಭಾ ಚಂಗಪ್ಪ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಇದಾಗಿದೆ.

ಯುವ ಪೀಳಿಗೆಗೆ ಶೇಷ್ಟ ಕಲಾವಿದೆ ಪ್ರಭಾ ಚಂಗಪ್ಪ ತಮ್ಮ ಮಧುರ ಕಂಠದಿAದ ಹಾಡಿದ ಅತ್ಯುತ್ತಮ ಸಾಹಿತ್ಯವಿರುವ ಕೊಡವ ಹಾಡುಗಳನ್ನು ಕಲಿಸುವ ಹಾಗೂ ಅವರ ಅಭಿಮಾನಿಗಳಿಗೆ ಮತ್ತೊಮ್ಮೆ ನೆನಪಿಸುವ ಹಾಗೂ ಅವರ ಹಾಡಿನ ಮುಖಾಂತರ ಎಂದೆAದೂ ಅವರನ್ನು ಜೀವಂತವಾಗಿರಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳೆಲ್ಲರೂ ಭಾಗವಹಿಸಬೇಕಾಗಿ ಸಂಘಟಕರು ಕೋರಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಕಲಾವಿದರು ತೋಲಂಡ ಪ್ರಭಾ ಚಂಗಪ್ಪ ಅವರು ಹಾಡಿರುವ ಗೀತೆಗಳನ್ನೇ ಹಾಡಬೇಕು. ಜಾತಿ, ಧರ್ಮ, ವಯಸ್ಸಿನ ಯಾವುದೇ ಮಿತಿ ಇಲ್ಲದೆ ಪ್ರತಿಯೊಬ್ಬರೂ ಮುಕ್ತವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಮಾನ್ಯತಾ ಪತ್ರ, ಕಿರುಕಾಣಿಕೆಗಳನ್ನು ನೀಡಲಾಗುವುದು ಹಾಗೂ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೮೮೦೫೮೪೭೩೨ / ೯೪೪೮೩೨೬೦೧೪ /೯೪೮೦೫೫೬೬೬೭ ಸಂಖ್ಯೆಗಳನ್ನು ಸಂಪರ್ಕಿಸಬಹುದೆAದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.