ಶನಿವಾರಸಂತೆ, ಏ. ೨೨: ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮz

À ದಾಮೋದರ ಅವರ ಪುತ್ರ ಹೊನ್ನಪ್ಪ (೨೯) ಎಂಬಾತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಹೊನ್ನಪ್ಪ ಮಾನಸಿಕ ಅಸ್ವಸ್ತನಾಗಿದ್ದು, ಈತನ ತಮ್ಮ ರಂಗನಾಥನಿಗೆ ಮದುವೆಯಾಗಿದೆ. ತನಗೆ ಇನ್ನೂ ಮದುವೆ ಆಗಿಲ್ಲ ಎಂಬ ಕೊರಗಿನೊಂದಿಗೆ ಇಂದು ಬೆಳಿಗ್ಗೆ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದಾನೆೆ. ಈತನನ್ನು ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಂಬAಧಿ ಪರಶುರಾಮ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಸಹಾಯಕ ಠಾಣಾಧಿಕಾರಿ ಜಯರಾಮ್ ವಿಧಿ ೧೭೪ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.