ಮಡಿಕೇರಿ, ಏ. ೨೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತಾ. ೨೧ ರಿಂದ ಆರಂಭಗೊAಡಿದ್ದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಕುಟುಂಬ-೨೦೨೧ ಅನ್ನು ಮುಂದೂಡಲಾಗಿದೆ. ಕೋವಿಡ್-೧೯ರ ಆದೇಶದ ಮೇಲೆ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಈ ಪಂದ್ಯಾಟ ಮೇ ೧ರ ತನಕ ನಿಗದಿಯಾಗಿತ್ತು. ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.