ಮಡಿಕೇರಿ, ಏ. ೨೧: ಮಿತಿ ಮೀರುತ್ತಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವ ದಿಸೆಯಲ್ಲಿ ಸರ್ಕಾರ ಆದೇಶ ಹೊರಡಿಸಿರುವಂತೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂವಿನೊಂದಿಗೆ ವಾರಾಂತ್ಯದ ಕರ್ಫ್ಯೂ ಕೂಡ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ತಮ್ಮ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ವಾರದ ಎಲ್ಲಾ ದಿನಗಳಲ್ಲಿ ರಾತ್ರಿ ೯ ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಇದರೊಂದಿಗೆ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ ೯ ಗಂಟೆಯಿAದ ಸೋಮವಾರ ಬೆಳಿಗ್ಗೆ ೬ ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿ ತುರ್ತು ಹಾಗೂ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ. ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಬೆಳಿಗ್ಗೆ ೬ ಗಂಟೆಯಿAದ ಬೆಳಿಗ್ಗೆ ೧೦ ಗಂಟೆಯವರೆಗೆ ಆಹಾರ ದಿನಸಿ ಹಣ್ಣು ಹಂಪಲು ಮತ್ತು ತರಕಾರಿ, ಹಾಲಿನ ಉತ್ಪನ್ನಗಳು, ಮಾಂಸ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶವಿರುತ್ತದೆ.ಈ ಅವಧಿಯಲ್ಲಿ ಜನತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಬಹು ದಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಮತ್ತು ವಾರಾಂತ್ಯದ ಕರ್ಫ್ಯೂವಿನ ಹಗಲು ವೇಳೆ ಬೆಳಿಗ್ಗೆ ೬ ರಿಂದ ರಾತ್ರಿ ೯ ರವರೆಗೆ ರೆಸ್ಟೋರೆಂಟ್ ಹಾಗೂ ಆಹಾರ ಸೇವಿಸುವ ಕೇಂದ್ರಗಳಲ್ಲಿ ಆಹಾರವನ್ನು ‘ಪಾರ್ಸಲ್’ ಮಾತ್ರ ನೀಡಬಹುದಾಗಿದೆ. ಕರ್ಫ್ಯೂ ಅವಧಿಯಲ್ಲಿ ಜನರ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರ್ಫ್ಯೂ ಸಂದರ್ಭ ಎಲ್ಲಾ ರೀತಿಯ ಜಿಲ್ಲಾ, ರಾಜ್ಯ ಹಾಗೂ ಅಂತರ್‌ರಾಜ್ಯ ಸಂಚರಿಸುವ ಸರಕು ಸಾಗಾಣಿಕೆ ಗೂಡ್ಸ್ ಮತ್ತು ಕಾರ್ಗೊ ವಾಹನಗಳ (ಖಾಲಿ ವಾಹನಗಳು ಸೇರಿದಂತೆ) ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಜನತೆ ಅಂತರಾಜ್ಯ, ಅಂತರ್‌ಜಿಲ್ಲಾ ಸಂಚಾರಕ್ಕೆ ಸಂಬAಧಿಸಿದAತೆ ಈಗಾಗಲೇ ಇರುವಂತಹ ನಿಯಮಗಳು ಮುಂದುವರಿಯುತ್ತವೆ. ಮದುವೆಗೆ ೫೦ ಮಂದಿ ಮಾತ್ರ ಪಾಲ್ಗೊಳ್ಳಬಹುದು. ಕೊರೊನಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ವಾರಾಂತ್ಯದ ಕರ್ಫ್ಯೂ ಸಂದರ್ಭ ಮದುವೆ ಕಾರ್ಯ ನಡೆಸಬಹುದಾಗಿದ್ದು, ಮದುವೆಗೆ ತೆರಳುವವರು ವಿವಾಹ ಆಮಂತ್ರಣ ಪತ್ರವನ್ನು ಜೊತೆಯಲ್ಲಿಟ್ಟುಕೊಂಡು ತೆರಳಬಹುದಾಗಿದೆ. ಅಂತ್ಯಕ್ರಿಯೆಯಲ್ಲಿ ೨೦ ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ ಸಿಬ್ಬಂದಿ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಇರುವುದಿಲ್ಲ. ಆದರೆ ಇಲಾಖೆಯಿಂದ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು. ಸರ್ಕಾರಿ ಕಚೇರಿ, ಸಾರ್ವಜನಿಕ ಸಂಸ್ಥೆಗಳು ಶೇ. ೫೦ ಸಿಬ್ಬಂದಿಗಳನ್ನು ಬಳಸಿ ಕೋವಿಡ್ ನಿಯಮದಡಿ ಕೆಲಸ ಮಾಡಬೇಕು. ಶ್ರದ್ಧಾಕೇಂದ್ರಗಳಲ್ಲಿ ಅರ್ಚಕರು ಮಾತ್ರ ಧಾರ್ಮಿಕ

(ಮೊದಲ ಪುಟದಿಂದ) ವಿಧಿ ವಿಧಾನ ನೆರವೇರಿಸಬೇಕು. ಹೊರತಾಗಿ ಭಕ್ತರಿಗೆ ಅವಕಾಶವಿಲ್ಲ. ಕರ್ಫ್ಯೂ ಅವಧಿಯಲ್ಲಿ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ ನ್ಯಾಯಬೆಲೆ ಅಂಗಡಿ, ಆಹಾರ, ಧವಸಧಾನ್ಯ, ಹಣ್ಣು ತರಕಾರಿ, ಹಾಲು ಉತ್ಪನ್ನಗಳಿಗೆ ಅವಕಾಶವಿದ್ದು, ತೆರೆದ ಪ್ರದೇಶಗಳಲ್ಲಿ ಸಗಟು, ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಇದೆ ಎಂದು ತಿಳಿಸಿದರು.

ಸಾರ್ವಜನಿಕ ಸಾರಿಗೆ ವಾಹನದಲ್ಲಿ ಶೇ. ೫೦ ರಷ್ಟು ಮೀರದಂತೆ ಸಂಚರಿಸಲು ಅವಕಾಶವಿದೆ.

ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ತಿಳಿಸಿದ್ದು, ಆನ್‌ಲೈನ್ ಕ್ಲಾಸ್‌ಗೆ ಮಾತ್ರ ಅವಕಾಶವಿದೆ. ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ ಇದೆ. ಜಿಲ್ಲೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ.

ಸಾರ್ವಜನಿಕ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ಇರಲಿದೆ.ಎಂದು ಚಾರುಲತಾ ಸೋಮಲ್ ಹೇಳಿದರು.

ನಿರ್ಬಂಧಿತ ಚಟುವಟಿಕೆಗಳು

* ಎಲ್ಲಾ ಶಾಲೆ - ಕಾಲೇಜು ಶೈಕ್ಷಣಿಕ, ತರಬೇತಿ ಮುಂತಾದ ಕೇಂದ್ರಗಳು

* ಎಲ್ಲಾ ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್ನಾಸಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕೇಂದ್ರಗಳು, ಸ್ಟಾಡಿಯಾ, ಈಜು ಕೊಳ, ಮನರಂಜನೆ, ಅಮ್ಯೂಸ್‌ಮೆಂಟ್ ಪಾರ್ಕ್ಗಳು, ಥಿಯೇಟರ್‌ಗಳು, ಬಾರ್ ಮತ್ತು ಅಡಿಟೋರಿಯಂಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಇಂತಹ ಸ್ಥಳಗಳು.

* ಎಲ್ಲಾ ಸಾಮಾಜಿಕ, ರಾಜಕೀಯ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಒಗ್ಗೂಡುವಿಕೆ ಮತ್ತು ಇತರೆ ಅಧಿಕ ಸಂಖ್ಯೆಯಲ್ಲಿ ಸೇರುವಂತಹ ಒಗ್ಗೂಡುವಿಕೆಗಳು.

* ಎಲ್ಲಾ ಧಾರ್ಮಿಕ ಸ್ಥಳ, ಪೂಜಾ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಆದಾಗ್ಯೂ ಆಯಾ ಕೇಂದ್ರದಲ್ಲಿ ಪಾರಂಪರಿಕವಾಗಿ ಮತ್ತು ಧಾರ್ಮಿಕವಾಗಿ ನಡೆಸುವ ಚಟುವಟಿಕೆಗಳನ್ನು ಸಾರ್ವಜನಿಕರ ಪ್ರವೇಶ ಇಲ್ಲದೆ ನಡೆಸಬಹುದು ಎಂದು ಡಿಸಿ ವಿವರಿಸಿದರು. ಈ ಸಂದರ್ಭ ಎಸ್‌ಪಿ ಕ್ಷಮಾ ಮಿಶ್ರಾ, ಸಿಇಓ ಭಂವರ್ ಸಿಂಗ್ ಮೀನಾ, ಎಡಿಸಿ ರಾಜುಮೊಗವೀರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.