ಪೊನ್ನಂಪೇಟೆ, ಏ. ೨೧: ಇಡೀ ಜಗತ್ತನ್ನೇ ತಲ್ಲಣಗೊಳಿಸಿ ಜನರಲ್ಲಿ ಆತಂಕ ಹೆಚ್ಚಿಸುತ್ತಿರುವ ಮಹಾಮಾರಿ ಕೋವಿಡ್ ಅನ್ನು ನಿಯಂತ್ರಿಸುವುದು ಸರಕಾರದ ಕೆಲಸ ಮಾತ್ರ ಎಂದು ಪರಿಗಣಿಸಬಾರದು. ಈ ಸಾಂಕ್ರಾಮಿಕ ರೋಗಾಣುವನ್ನು ಪೂರ್ಣವಾಗಿ ನಿರ್ಮೂಲಗೊಳಿಸಿ ಕೋವಿಡ್ ಮುಕ್ತ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ.

ಆದ್ದರಿಂದ ಕೋವಿಡ್ ಪ್ರತಿರೋಧಿಸಲು ಸಾಮೂಹಿಕ ಹೊಣೆಗಾರಿಕೆ ಅಗತ್ಯ ಎಂದು 'ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ, ಉಪನ್ಯಾಸಕ ಎಂ.ಎನ್. ವನಿತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ಪೊನ್ನಂಪೇಟೆ ನಿಸರ್ಗ ಜೇಸಿಸ್) ಘಟಕದ ವತಿಯಿಂದ ಗೋಣಿ ಕೊಪ್ಪಲಿನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಘಟಕದ ವತಿಯಿಂದ ಉಚಿತ ಅಭಿಪ್ರಾಯಪಟ್ಟಿದ್ದಾರೆ.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ಪೊನ್ನಂಪೇಟೆ ನಿಸರ್ಗ ಜೇಸಿಸ್) ಘಟಕದ ವತಿಯಿಂದ ಗೋಣಿ ಕೊಪ್ಪಲಿನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಘಟಕದ ವತಿಯಿಂದ ಉಚಿತ ಕಾರ್ಯಕ್ರಮದಲ್ಲಿ ಭಾರತೀಯ ಜೇಸಿಸ್‌ನ ವಲಯ-೧೪ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಫೀಕ್ ತೂಚಮಕೇರಿ, ಘಟಕದ ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ, ಗೋಣಿಕೊಪ್ಪಲು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ, ಘಟಕದ ಪ್ರಥಮ ಮಹಿಳೆ ಮೇಘನಾ ವನಿತ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

ಘಟಕದ ಉಪಾಧ್ಯಕ್ಷ ಹೆಚ್.ಆರ್. ಸತೀಶ್ ಜೇಸಿವಾಣಿ ವಾಚಿಸಿದರು. ವನಿತ್ ಕುಮಾರ್. ಸ್ವಾಗತಿಸಿದರು. ಮತ್ತೋರ್ವ ಉಪಾಧ್ಯಕ್ಷ ಎನ್.ಜಿ. ಸುರೇಶ್ ವಂದಿಸಿದರು.