ಸುಂಟಿಕೊಪ್ಪ, ಏ. ೨೧: ಸುಂಟಿಕೊಪ್ಪ ಗದ್ದೆಹಳ್ಳದ ಜೀವನದಾರಿ ವಿಕಾಸ್ ಜನಸೇವಾ ಟ್ರಸ್ಟ್ನ ಆಶ್ರಮಕ್ಕೆ ಮಡಿಕೇರಿಯ ಕ್ಲಬ್ ಮಹೇಂದ್ರ ಹಾಲಿಡೇ ರೆಸಾರ್ಟ್ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಕ್ಲಬ್ ಮಹೇಂದ್ರ ಹಾಲಿಡೇ ರೆಸಾರ್ಟ್ನ ಸಿಬ್ಬಂದಿಗಳು ಜನಸೇವಾ ಟ್ರಸ್ಟ್ನ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದಲ್ಲಿ ನೆಲೆಸಿರುವವರ ಯೋಗಕ್ಷೇಮ ವಿಚಾರಿಸಿದ ಹೆಚ್.ಆರ್.ಡಿ. ನವೀನ್ ನೊರೋನ್ಹ ಮತ್ತು ಸಿಬ್ಬಂದಿಗಳಾದ ಪಿ.ಪಿ. ತಿಮ್ಮಯ್ಯ, ಧನುಕುಮಾರ್, ಬಿ.ಸಿ. ಜನಾರ್ದನ, ಎನ್. ವಿನಯನ್ ಹಾಗೂ ವಿಕಾಸ್ ಜನಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ಅವರ ಸೇವೆಯನ್ನು ಮುಕ್ತ ಕಂಠದಿAದ ಸ್ಮರಿಸಿದರು. ಈ ಸಂದರ್ಭ ಜೀವನದಾರಿ ವಿಕಾಸ್ ಜನಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.