ನಾಪೋಕ್ಲು, ಏ. ೨೧: ಸಮೀಪದ ಕಗ್ಗೋಡ್ಲು ಗ್ರಾಮದ ವೃಷಭಾರೂಢ ಭಗವತಿ ದೇವರ ವಾರ್ಷಿಕ ಉತ್ಸವವು ಸಂಪನ್ನಗೊAಡಿತು.

ಉತ್ಸವದ ಅಂಗವಾಗಿ ಮಹಾಪೂಜೆ, ಹರಕೆ ಪೂಜೆಗಳು, ಆಶ್ಲೇಷ ಬಲಿ, ದೇವಿಯ ಅವಭೃತ ಸ್ನಾನ, ನೃತ್ಯ ಬಲಿ, ಕಲಶಾಭಿಷೇಕ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಬೇಟೆ ಅಯ್ಯಪ್ಪ ಕೋಲದೊಂದಿಗೆ ಉತ್ಸವ ಸಂಪನ್ನಗೊAಡಿತು. ಅರ್ಚಕ ರಾಮಚಂದ್ರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.