ಮಡಿಕೇರಿ, ಏ. ೨೧: ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹೊಟೇಲ್, ಬಾರ್, ರೆಸ್ಟೊರೆಂಟ್ ಇತ್ಯಾದಿ ಕಡೆಗಳಲ್ಲಿ ಕಡ್ಡಾಯವಾಗಿ ಗ್ರಾಹಕರು ವ್ಯಾಪಾರಿಗಳು ಮಾಸ್ಕ್ ಧರಿಸಬೇಕು. ಪದಾರ್ಥಗಳನ್ನು ಪಾರ್ಸಲ್ ಮಾತ್ರ ಕೊಡಬೇಕು. ಜನಜಂಗುಳಿ ಉಂಟಾಗದAತೆ ಎಚ್ಚರ ವಹಿಸಬೇಕು. ಕೊರೊನಾ ನಿಯಮ ಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಬೇಕು. ನಿಗದಿತ ಜನಕ್ಕಿಂತ ಹೆಚ್ಚು ಮಂದಿ ಯಾವುದೇ ಕಾರ್ಯ ಕ್ರಮಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಪಾಲ್ಗೊಂಡರೆ ಸಂಬAಧಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂಬುದಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನಗರಸಭೆಯಿಂದ ಧ್ವನಿವರ್ಧಕದ ಮೂಲಕ ಪ್ರಚಾರ ಕಾರ್ಯ ಕೈಗೊಂಡು ನಗರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನಿಯಮ ಮೀರಿದವರಿಗೆ ದಂಡವನ್ನು ಕೂಡ ವಿಧಿಸಲಾಗುತ್ತಿದೆ ಎಂದು ನಗರಸಭಾ ಆಯುಕ್ತ ರಾಮದಾಸ್ ತಿಳಿಸಿದ್ದಾರೆ. ಕಾಲೇಜು ರಸ್ತೆ ಸೇರಿದಂತೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ಒಂದು ತಂಡವನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಮಡಿಕೇರಿ, ಏ. ೨೧: ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹೊಟೇಲ್, ಬಾರ್, ರೆಸ್ಟೊರೆಂಟ್ ಇತ್ಯಾದಿ ಕಡೆಗಳಲ್ಲಿ ಕಡ್ಡಾಯವಾಗಿ ಗ್ರಾಹಕರು ವ್ಯಾಪಾರಿಗಳು ಮಾಸ್ಕ್ ಧರಿಸಬೇಕು. ಪದಾರ್ಥಗಳನ್ನು ಪಾರ್ಸಲ್ ಮಾತ್ರ ಕೊಡಬೇಕು. ಜನಜಂಗುಳಿ ಉಂಟಾಗದAತೆ ಎಚ್ಚರ ವಹಿಸಬೇಕು. ಕೊರೊನಾ ನಿಯಮ ಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಬೇಕು. ನಿಗದಿತ ಜನಕ್ಕಿಂತ ಹೆಚ್ಚು ಮಂದಿ ಯಾವುದೇ ಕಾರ್ಯ ಕ್ರಮಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಪಾಲ್ಗೊಂಡರೆ ಸಂಬAಧಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂಬುದಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನಗರಸಭೆಯಿಂದ ಧ್ವನಿವರ್ಧಕದ ಮೂಲಕ ಪ್ರಚಾರ ಕಾರ್ಯ ಕೈಗೊಂಡು ನಗರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನಿಯಮ ಮೀರಿದವರಿಗೆ ದಂಡವನ್ನು ಕೂಡ ವಿಧಿಸಲಾಗುತ್ತಿದೆ ಎಂದು ನಗರಸಭಾ ಆಯುಕ್ತ ರಾಮದಾಸ್ ತಿಳಿಸಿದ್ದಾರೆ. ಕಾಲೇಜು ರಸ್ತೆ ಸೇರಿದಂತೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ಒಂದು ತಂಡವನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ದಾಕ್ಷಾಯಿಣಿ, ಶಿರೆಸ್ತದಾರ್ ರಾಧಕೃಷ್ಣ ಕಂದಾಯ ಅಧಿಕಾರಿ ಮಂಜುನಾಥ್ ಗ್ರಾಮ ಲೆಕ್ಕಿಗ ಯಶ್‌ವಂತ್, ಗ್ರಾಮ ಸಹಾಯಕರಾದ ಪೂವಯ್ಯ, ರಾಜೇಶ್, ಸುನೀಲ್, ಪೊನ್ನಂಪೇಟೆ ಪಂಚಾಯಿತಿ ಪಿಡಿಒ ಪುಟ್ಟಸ್ವಾಮಿ, ಸಿಬ್ಬಂದಿ ಅಣ್ಣಪ್ಪ, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.
ಕಾನೂನು ಪಾಲಿಸಲು ಸಲಹೆ
ಭಾಗಮಂಡಲ: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಎಲ್ಲಾ ನಾಗರಿಕರು ಸರಕಾರದ ಕಾನೂನನ್ನು ತಪ್ಪದೇ ಪಾಲಿಸುವುದರೊಂದಿಗೆ ತಮ್ಮ ಪ್ರಾಣವನ್ನು ತಾವು ಕಾಪಾಡಿಕೊಳ್ಳಬೇಕು ಎಂದು ಮಡಿಕೇರಿ ತಾಲೂಕು ಗ್ರಾಮಾಂತರ ಪೊಲೀಸ್ ಠಾಣಾ ವೃತ್ತನಿರೀಕ್ಷಕ ದಿವಾಕರ್ ಸಲಹೆ ನೀಡಿದರು.
ಭಾಗಮಂಡಲ ಪೊಲೀಸ್ ಠಾಣಾ ವತಿಯಿಂದ ಭಾಗಮಂಡಲ, ಕೋರಂಗಾಲ ಮತ್ತು ಚೇರಂಬಾಣೆಗಳಲ್ಲಿ ಕೋವಿಡ್ ೧೯ ವಿರುದ್ಧ ಜನಾಂದೋಲನ ಕಾರ್ಯ ಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ಕಾನೂನುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಮಾಸ್ಕ್ ಧರಿಸದವರ ವಿರುದ್ಧ ಪೋಲಿಸ್ ಇಲಾಖೆ ವತಿಯಿಂದ ಇದುವರೆಗೆ ದಂಡ ವಿಧಿಸಲಾಗಿತ್ತು. ಇನ್ನುಮುಂದೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರ ಮತ್ತು ಭಾನುವಾರ ಕರ್ಫ್ಯೂ ವಿಧಿಸಲಾಗುತ್ತಿದ್ದು, ಅಂಗಡಿಮುAಗಟ್ಟುಗಳಲ್ಲಿ ಅಗತ್ಯವಿರುವ ವಸ್ತುಗಳನ್ನು ೧೦ ಗಂಟೆಯ ಒಳಗೆ ಖರೀದಿಸಬೇಕು. ಕಳೆದ ಬಾರಿಗಿಂತ ಈ ಬಾರಿ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚು ಇದ್ದು, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂದರು. ಠಾಣಾಧಿಕಾರಿ ಮಹದೇವ್ ಮಾತನಾಡಿ, ಸೋಂಕಿನ ವಿರುದ್ಧ ವ್ಯಕ್ತಿಯೇ ಜಾಗರೂಕ ನಾಗಿರಬೇಕು. ಸೋಂಕಿನಿAದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಅನಗತ್ಯ ಓಡಾಟವನ್ನು ಕಡಿಮೆ ಮಾಡಬೇಕು. ತುರ್ತು ಕೆಲಸಕ್ಕೆ ಅಗತ್ಯವಿದ್ದರೆ ಮಾತ್ರ ಮಕ್ಕಳನ್ನು ವಯಸ್ಕರನ್ನು ಕರೆತನ್ನಿ ಎಂದರು. ಜನಾಂದೋಲನ ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.
ಜನಾAದೋಲನ ಕಾರ್ಯಕ್ರಮ
ಶನಿವಾರಸಂತೆ : ಶನಿವಾರಸಂತೆ ಪಟ್ಟಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇಂದು ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಹಾಗೂ ಪೊಲೀಸರು ಕಾಲ್ನಡಿಗೆಯಲ್ಲಿ ಸಂಚರಿಸಿ, ಕೋವಿಡ್ ಸೋಂಕು ಅಧಿಕವಾಗುತ್ತಿರುವುದರಿಂದ ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆ ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅಂಗಡಿ, ಹೊಟೇಲ್, ಬಾರ್‌ಗಳಿಗೆ ಹಾಗೂ ಸಾರ್ವಜನಿಕರು ಕಡ್ಡಾಯ ವಾಗಿ ಮಾಸ್ಕ್ನ್ನು ಧರಿಸಿರಬೇಕು, ತಪ್ಪಿದರೆ ದಂಡವನ್ನು ವಿಧಿಸಲಾಗು ವುದು. ಅಲ್ಲದೆ ಪ್ರತಿಯೊಬ್ಬರು ಅಂತರವನ್ನು ಕಾಯ್ದುಕೊಳ್ಳಬೇಕು. ಇದನ್ನು ಪಾಲಿಸದೇ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಪೊಲೀಸ್ ಸಿಬ್ಬಂದಿ ಗಳಾದ ಬೋಪಣ್ಣ, ಸೋಮ ಶೇಖರ್, ಲೋಕೇಶ್, ಮುರುಳಿ, ಪ್ರದೀಪ್ ಕುಮಾರ್, ಜಯಕುಮಾರ್, ರಾಧ ಹಾಜರಿದ್ದರು.
ಕಡಂಗ: ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಇದರೊಂದಿಗೆ ಕೋವಿಡ್ ವ್ಯಾಕ್ಸಿನ್ ಲಸಿಕೆ ಹಾಕುವ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ಉಪಕಾರಿ ಯಾಗುತ್ತಿದೆ.
ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಲಸಿಕೆ ಹಾಕಲಾಯಿತು. ಸುತ್ತಮುತ್ತ ಗ್ರಾಮದ ೪೫ ವರ್ಷಕ್ಕೂ ಮೇಲ್ಪಟ್ಟವರು ಲಸಿಕಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಆರೋಗ್ಯ ಅಧಿಕಾರಿಗಳಾದ ಶೈಲಜಾ, ಕಾವೇರಮ್ಮ, ಭವಾನಿ, ರೋಹಿಣಿ, ಕನಕವಾತಿ, ಗ್ರಾಮ ಪಂಚಾಯಿತಿ ಅಧಿಕಾರಿ ಆಶಾ, ಸದಸ್ಯರಾದ ಸುಬೀರ್, ಕೋಡಿರ ವಿನೋದ್, ರಾಣಿ ಗಣಪತಿ, ವಾಣಿ ಇದ್ದರು.
ಉಚಿತ ಮಾಸ್ಕ್ ವಿತರಣೆ
ಕುಶಾಲನಗರ: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕೋವಿಡ್-೧೯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೆಡ್‌ಕ್ರಾಸ್ ಮತ್ತು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು ಅರಿವು ಜಾಗೃತಿ ಮೂಡಿಸುವುದರೊಂದಿಗೆ, ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದರು.
ರೆಡ್‌ಕ್ರಾಸ್ ತಾಲೂಕು ಅಧ್ಯಕ್ಷ ಎಸ್.ಕೆ. ಸತೀಶ್ ಮತ್ತು ಚೇಂಬರ್ ಸ್ಥಾನೀಯ ಸಮಿತಿ ಅಧ್ಯಕ್ಷ ಅಮೃತ್‌ರಾಜ್ ನೇತೃತ್ವದಲ್ಲಿ ಪಟ್ಟಣದ ರಸ್ತೆಗಳಲ್ಲಿ ತೆರಳಿದ ಪ್ರಮುಖರು ಕೊರೊನಾ ಸೋಂಕು ನಿವಾರಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಪ್ರಮುಖರಾದ ಕೆ.ಪಿ. ಚಂದ್ರಶೇಖರ್, ರಂಗಸ್ವಾಮಿ, ವೈಶಾಕ್, ಬಿ.ಡಿ. ಅಣ್ಣಯ್ಯ ಮತ್ತಿತರರು ಇದ್ದರು.