ಮಡಿಕೇರಿ, ಏ. ೨೧: ಗೆಳೆಯರ ಬಳಗದ ಸ್ಥಾಪನೆ ಮುಖ್ಯವಲ್ಲ, ಬಳಗದಿಂದ ಸಮಾಜದ ಏಳಿಗೆಯೂ ಕಾಣುವಂತಾಗಬೇಕು ಹಾಗೂ ಸಮಾಜದ ಸರ್ವ ಜನಾಂಗದ ಅಭಿವೃದ್ಧಿಗೆ ಬಳಕೆಯಾಗುವಂತಾಗಲಿ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕಾಳೆಯಂಡ ಸಾಬು ತಿಮ್ಮಯ್ಯ ಅಭಿಮತ ವ್ಯಕ್ತಪಡಿಸಿದರು.
ಬೇತು ಗ್ರಾಮದಲ್ಲಿ ಐ.ಎ.ಜಿ. ಗೆಳೆಯರ ಬಳಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಭಾಗವಹಿಸಿ ಬಳಗದ ಅಭಿವೃದ್ಧಿ ಕಾರ್ಯಗಳ ಹಾಗೂ ನಡಾವಳಿಯ ಬಗ್ಗೆ ವಿವರಣೆ ನೀಡಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಇಸ್ಮಾಯಿಲ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಐರೀರ ಪೂಣಚ್ಚ ವಹಿಸಿದ್ದರು. ಬಳಗದ ಕಾರ್ಯದರ್ಶಿ ಐರೀರ ಸೋಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಪಾತಂಡ ಸೋಮಯ್ಯ ನಿರೂಪಿಸಿ, ಸದಸ್ಯ ಉಮೇಶ್ ಬಳಗದ ಬೈಲಾದ ವಿವರಣೆ ನೀಡಿದರು. ಗಂಗೆರ ಬೋಪಯ್ಯ ವಂದಿಸಿದರು.