ಮಡಿಕೇರಿ, ಏ. ೨೧: ಮೈತ್ರಿ ಪ್ರಕಾಶನ ಸಂಸ್ಥೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮೈತ್ರಿ ಸಂಭ್ರಮ-೨೦೨೧ ಕಾರ್ಯಕ್ರಮದಲ್ಲಿ ಕೊಡಗಿನ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರು ಬರೆದ ಕೃತಿ ಕೂರ್ಗ್ ರೆಜಿಮೆಂಟ್ ಕಥಾ ಸಂಕಲನದ ಮೂರನೇ ಮುದ್ರಣದ ಪ್ರತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಬಸವನಗುಡಿಯ ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ವೋರ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನಾ ಸಂಸ್ಥೆಯ ಜಿ.ಯಸ್. ಮೋಹನ್ , ಲೇಖಕಿ ಭುವನೇಶ್ವರ ಹೆಗಡೆ, ಸಾಹಿತಿ ಜೋಗಿ, ಜಯನಗರದ ಹುಡುಗಿ ಮೇಘನಾ ಸುಧೀಂದ್ರ ಮತ್ತು ಇತರ ಗಣ್ಯರು ಸೇರಿದ್ದು, ಮೈತ್ರಿ ಪ್ರಕಾಶನದ ಇತರ ನಾಲ್ಕು ಪುಸ್ತಕಗಳನ್ನೂ ಲೋಕಾರ್ಪಣೆ ಮಾಡಲಾಯಿತು.