ಕೂಡಿಗೆ, ಏ. ೨೧: ಇಲ್ಲಿಗೆ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಸರಳವಾಗಿ ನಡೆಯಿತು.
ಪವಿತ್ರ ಗಂಗೋದಕದಿAದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ. ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಕೊರೊನಾ ಹಿನ್ನೆಲೆ ಸರಳವಾಗಿ ನಡೆದವು.
ಹೂ ಮತ್ತು ಬಣ್ಣದ ತಳಿರು ತೋರಣಗಳಿಂದ ಶೃಂಗಾರಗೊAಡಿದ್ದ ರಥಕ್ಕೆ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ ನಂತರ ಸ್ವಲ್ಪ ದೂರದವರೆಗೆ ಎಳೆದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಸ್. ಸುರೇಶ್, ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಪೂಜಾ ಕೈಂಕರ್ಯವನ್ನು ಮೈಸೂರಿನ ನರಹರಿ ತಂಡದವರು ನೆರವೇರಿಸಿದರು.
ನಡೆದವು.