ಶನಿವಾರಸಂತೆ, ಏ. ೨೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕರ ಅರ್ಜಿಗಳು ಹಾಗೂ ಸರಕಾರಿ ಕಾಗದ ಪತ್ರಗಳನ್ನು ಪರಿಶೀಲಿಸಿ ಚರ್ಚಿಸಲಾಯಿತು.
ಶನಿವಾರಸಂತೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗದಿರುವ ಬಗ್ಗೆ ಸದಸ್ಯ ಸರ್ದಾರ್ ಅಹಮದ್ ಅವರು ಅಧ್ಯಕ್ಷರು ಹಾಗೂ ಪಿಡಿಓ ಅವರ ಬಳಿ ಆಕ್ಷೇಪ ವ್ಯಕ್ತಪಡಿಸಿ, ಕಾರಣ ಕೇಳಿದರು. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಸುತ್ತಮುತ್ತಲಿನ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಸಂಬAಧ ಪಟ್ಟ ಇಲಾಖೆಗೆ ಸಾಮಾನ್ಯ ಸಭೆಯ ನಿರ್ಣಯ ಕಳುಹಿಸಿಕೊಟ್ಟು ಆದಷ್ಟು ಬೇಗ ವೈದ್ಯರನ್ನು ನೇಮಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದ್ದು, ಪ್ರತಿದಿನ ಜನರು ತಮ್ಮ ಅಹವಾಲನ್ನು ಹೇಳಿಕೊಳ್ಳಲು ಶನಿವಾರಸಂತೆ, ಏ. ೨೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕರ ಅರ್ಜಿಗಳು ಹಾಗೂ ಸರಕಾರಿ ಕಾಗದ ಪತ್ರಗಳನ್ನು ಪರಿಶೀಲಿಸಿ ಚರ್ಚಿಸಲಾಯಿತು.
ಶನಿವಾರಸಂತೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗದಿರುವ ಬಗ್ಗೆ ಸದಸ್ಯ ಸರ್ದಾರ್ ಅಹಮದ್ ಅವರು ಅಧ್ಯಕ್ಷರು ಹಾಗೂ ಪಿಡಿಓ ಅವರ ಬಳಿ ಆಕ್ಷೇಪ ವ್ಯಕ್ತಪಡಿಸಿ, ಕಾರಣ ಕೇಳಿದರು. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಸುತ್ತಮುತ್ತಲಿನ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಸಂಬAಧ ಪಟ್ಟ ಇಲಾಖೆಗೆ ಸಾಮಾನ್ಯ ಸಭೆಯ ನಿರ್ಣಯ ಕಳುಹಿಸಿಕೊಟ್ಟು ಆದಷ್ಟು ಬೇಗ ವೈದ್ಯರನ್ನು ನೇಮಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದ್ದು, ಪ್ರತಿದಿನ ಜನರು ತಮ್ಮ ಅಹವಾಲನ್ನು ಹೇಳಿಕೊಳ್ಳಲು ತ್ಯಾಗರಾಜ ಕಾಲೋನಿಯ ಪಕ್ಕದ ಚೌಡಮ್ಮ ಬನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಅಗತ್ಯವಾಗಿ ಅವಶ್ಯವಿರುವ ಸೌಕರ್ಯಗಳಿಗೆ ತಕ್ಷಣ ಒತ್ತು ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಶನಿವಾರ ಸಂತೆಯ ಗುಂಡೂರಾವ್ ಬಡಾವಣೆ ಕೆರೆಯ ಹೂಳೆತ್ತುವಂತೆ ತೀರ್ಮಾನಿಸ ಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಸಿ. ಶರತ್‌ಶೇಖರ್, ಎಸ್.ಎನ್. ರಘು, ಆದಿತ್ಯಗೌಡ, ಸರ್ದಾರ್, ಗೀತಾಹರೀಶ್, ಫರ್ಜಾನ ಶಾಹಿದ್, ಸರಸ್ವತಿ, ಕಾವೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಚಾರ್, ಲೆಕ್ಕ ಸಹಾಯಕ ವಸಂತ್, ಕಂಪ್ಯೂಟರ್ ನಿರ್ವಾಹಕಿಯರಾದ ಫೌಜಿಯಾ, ಲೀಲಾವತಿ ಉಪಸ್ಥಿತರಿದ್ದರು.