ಗೋಣಿಕೊಪ್ಪ ವರದಿ, ಏ. ೧೮: ನಕ್ಸಲ್ ದಾಳಿಗೆ ವೀರ ಮರಣಹೊಂದಿದ ಯೋಧರಿಗೆ ಅಮ್ಮತ್ತಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೀರ ಯೋಧರ ಭಾವಚಿತ್ರವನ್ನು ಪಟ್ಟಣದ ಮುಖ್ಯ ವೃತ್ತದಲ್ಲಿ ಅನಾವರಣಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಘಟಕದ ಅಧ್ಯಕ್ಷ ಟಿ.ಬಿ. ವಿಜು, ಪ್ರಧಾನ ಕಾರ್ಯದರ್ಶಿ ವಿ.ಕೆ. ವಿನು, ತಾಲೂಕು ಸಂಪರ್ಕ ಪ್ರಮುಖ್ ಸಿ.ಕೆ. ರವಿ, ವಲಯ ಅಧ್ಯಕ್ಷ ಎಂ.ಕೆ. ಕೃಷ್ಣ ಇತರರು ಭಾಗವಹಿಸಿದ್ದರು.