ಚೆಟ್ಟಳ್ಳಿ, ಏ. ೧೮: ಕೊಡಗು ಸೇವಾ ಕೇಂದ್ರ ಮತ್ತು ಕೊಡಗು ಫಾರ್ ಟುಮಾರೋ ಸಂಘಟನೆಯ ಸಹಯೋಗದಲ್ಲಿ ಸೋಮವಾರಪೇಟೆ ತಾಲೂಕಿನ ಕುಗ್ರಾಮಗಳಾದ ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ, ಮುಟ್ಲು, ಹಮ್ಮಿಯಾಲದ ಸುಮಾರು ೧೩೦ ಕುಟುಂಬಗಳಿಗೆ ತಲಾ ಎರಡು ಜೇನು ಪೆಟ್ಟಿಗೆಯಂತೆ ಸುಮಾರು ೨೬೦ ಪೆಟ್ಟಿಗೆಯನ್ನು ಜೇನು ಹುಳುವಿನ ಸಮೇತ ವಿತರಿಸಲಾಯಿತು. ಈ ಎಲ್ಲಾ ಜೇನು ಪೆಟ್ಟಿಗೆಗಳನ್ನು ತುಮಕೂರಿನ ಎವ್ರಿ ಡೇ ಹನಿ ಫಾರ್ಮ್ನಿಂದ ತರಿಸ ಲಾಗಿದೆ. ಸೇವಾಕೇಂದ್ರದ ಪ್ರಮುಖರಾದ ಪ್ರಮೋದ್ ಸೋಮಯ್ಯ ಮಾತನಾಡಿ, ಗ್ರಾಮಸ್ಥರು ಬರುವ ವರ್ಷಕ್ಕೆ ಈ ಪೆಟ್ಟಿಗೆಗಳ ಮೇಲೆ ನಿಗಾವಹಿಸಿ ಯಾರೆಲ್ಲ ಜೇನು ಉತ್ಪತ್ತಿ ಮಾಡುತ್ತಾರೋ ಅಂತವರಿಗೆ ತಾವು ಇನ್ನು ತಲಾ ನಾಲ್ಕು ಪೆಟ್ಟಿಗೆ ವಿತರಿಸುತ್ತೇವೆ ಎಂದರು. ಕೊಡಗು ಫಾರ್ ಟುಮಾರೋ ಸಂಚಾ ಲಕರಾದ ಪಿ. ಕಾವೇರಪ್ಪ ಮಾತನಾಡಿ ತಾವು ಜೇನು ಸಾಕಾಣಿಕೆ ಬಗ್ಗೆ ತರಬೇತಿ ನೀಡು ತ್ತೇವೆ, ತಾವೆಲ್ಲರೂ ಅದರ ಸದುಪ ಯೋಗ ಪಡೆಯಬೇಕೆಂದರು. ಕಾರ್ಯ ಕ್ರಮದಲ್ಲಿ ಕೊಡಗು ಸೇವಾಕೇಂದ್ರದ ಪದಾಧಿಕಾರಿಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಮಂದಪAಡ ಸತೀಶ್, ಮದನ್ ಮತ್ತು ಕೊಡಗು ಫಾರ್ ಟುಮಾರೋ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.