ಮಡಿಕೇರಿ, ಏ. ೧೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತನ್ನ ಕಾರ್ಯ ಯೋಜನೆಯಲ್ಲಿ ಕೊಡವ ಆಚಾರ-ವಿಚಾರ, ಪದ್ಧತಿ-ಪರಂಪರೆ, ಭಾಷೆ-ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಅದರಂತೆ ಮಾರ್ಚ್ ೨೬ ರ ಮುಂದುವರೆದ ಭಾಗವಾಗಿ ಕೊಡವ ಕಿರುಸಿನಿಮಾ ಸ್ಪರ್ಧೆಗೆ ನಿಯಮಗಳಿಗೆ ಅನ್ವಯವಾಗುವಂತೆ ಆಸಕ್ತಿವುಳ್ಳವರು ನೋಂದಾಯಿಸಿಕೊಳ್ಳಬಹುದು.

ಕೊಡವ ಕಿರು ಸಿನಿಮಾವನ್ನು ೧೫ ನಿಮಿಷದಲ್ಲಿ ಪ್ರದರ್ಶಿಸಬೇಕು. ಸಿನಿಮಾವು ಕೊಡವ ಭಾಷೆಯದ್ದಾಗಿರಬೇಕು. ಹಾಗೂ ಸಿನಿಮಾ ರೂಪಿಸುವವರು ಸಿನಿಮಾದಲ್ಲಿ ಕೊಡವ ಭಾಷೆ ಮಾತನಾಡುವ ಕೊಡವ ಹಾಗೂ ೧೮ ಭಾಷಿಕ ಸಮುದಾಯಗಳ ಸಂಸ್ಕೃತಿ, ಭಾಷೆ, ಹಾಗೂ ಸಾಹಿತ್ಯಕ್ಕೆ ಸಂಬAಧಿಸಿದ ಸಕರಾತ್ಮಕ ವಿಷಯಗಳಿಗೆ ಪೂರಕವಾದ ಅಂಶಗಳನ್ನು ಅಳವಡಿಸಿರಬೇಕು. ಕಿರು ಸಿನಿಮಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ನಿರ್ದೇಶಕರು ತಾ. ೨೦ ರೊಳಗೆ ಅಕಾಡೆಮಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಸ್ಪರ್ಧೆ ನಡೆಸುವ ದಿನಾಂಕವನ್ನು ನೋಂದಾಯಿಸಿದವರಿಗೆ ತಿಳಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿ ಇರುವುದಿಲ್ಲ. ಕಿರು ಸಿನಿಮಾ ತಯಾರಿಸಿದ ತಂಡಗಳು ತಮ್ಮ ಸಿನಿಮಾದ ವಿಡಿಯೋವನ್ನು ಸಿ.ಡಿ. ಅಥವಾ ಪೆನ್‌ಡ್ರೆöÊವ್‌ನಲ್ಲಿ ಹಾಕಿ ಸ್ಪರ್ಧೆಯ ನಿಗದಿತ ದಿನಾಂಕದAದು ಪ್ರದರ್ಶಿಸಬೇಕು.

ಸಿನಿಮಾ ಸ್ಪರ್ಧೆಯಲ್ಲಿ ಗೆದ್ದವರಿಗೆ ಅಕಾಡೆಮಿ ವತಿಯಿಂದ ನಗದು ಬಹುಮಾನ (ಪ್ರಥಮ ಬಹುಮಾನ ರೂ. ೨೦ ಸಾವಿರ, ದ್ವಿತೀಯ ಬಹುಮಾನ ರೂ. ೧೫ ಸಾವಿರ, ತೃತೀಯ ಬಹುಮಾನ ರೂ. ೧೦ ಸಾವಿರ) ನೀಡಲಾಗುವುದು. ಏನೇ ತಕರಾರುಗಳು ಇದ್ದಲ್ಲಿ ಅಕಾಡೆಮಿ ನೇಮಿಸಲ್ಪಟ್ಟ ಅಧಿಕೃತ ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಿರತಕ್ಕದ್ದು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಹೆಚ್ಚಿನ ಮಾಹಿತಿಗೆ ದೂ. ೦೮೨೭೨-೨೨೯೦೭೪ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.