ಸೋಮವಾರಪೇಟೆ,ಏ.೧೮: ಸೋಬಾನೆ ಹಾಡನ್ನು ಕಲಿತು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಕರ್ತವ್ಯ ನಮ್ಮದಾಗಬೇಕು. ಇದರೊಂದಿಗೆ ಅರೆಭಾಷೆ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸೋಮವಾರಪೇಟೆ,ಏ.೧೮: ಸೋಬಾನೆ ಹಾಡನ್ನು ಕಲಿತು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಕರ್ತವ್ಯ ನಮ್ಮದಾಗಬೇಕು. ಇದರೊಂದಿಗೆ ಅರೆಭಾಷೆ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಯಾವುದೇ ಸಂಗೀತ ತರಗತಿಗಳಿಗೆ ಹೋಗದೆ, ನಮ್ಮ ಹಿರಿಯರು ಸೋಬಾನೆ ಹಾಡನ್ನು ಮಧುರವಾಗಿ ಹಾಡುತ್ತಿದ್ದರು. ಪ್ರತಿಯೊಂದು ಮನೆ ಮನೆಯಲ್ಲೂ ಸೋಬಾನೆ ಹಾಡನ್ನು ಹಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಅಕಾಡೆಮಿ ವತಿಯಿಂದ ಪ್ರಕಟಗೊಳ್ಳುತ್ತಿರುವ ನಮ್ಮ ಹಿಂಗಾರ ಎಂಬ ಅರೆಭಾಷೆ ಮಾಸ ಪತ್ರಿಕೆಯು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ. ಇದನ್ನು

(ಮೊದಲ ಪುಟದಿಂದ) ಪ್ರತಿಯೊಬ್ಬರೂ ಓದುವ ಮೂಲಕ ಅರೆಭಾಷೆ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕೆAದರು.

ಮುಖ್ಯ ಅತಿಥಿಗಳಾಗಿ ಗೌಡ ಸಮಾಜದ ಮಾಜಿ ಅಧ್ಯಕ್ಷ ತೊತ್ತಿಯನ ಕೇಶವಯ್ಯ ಪಾಲ್ಗೊಂಡು, ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ಇಂದಿನ ಯುವ ಜನಾಂಗ ಮುತುವರ್ಜಿಯಿಂದ ಅಭ್ಯಾಸ ಮಾಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಸಮಾಜದ ಅಧ್ಯಕ್ಷರಾದ ಕಡ್ಲೇರ ಹೊನ್ನಪ್ಪ ವಹಿಸಿದ್ದರು. ಶಿಬಿರದಲ್ಲಿ ಸಮಾಜದ ಸದಸ್ಯರು, ಅಕಾಡೆಮಿ ಸದಸ್ಯರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ನಂಗಾರು ಕೀರ್ತಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಕಡ್ಯದ ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.