ಗೋಣಿಕೊಪ್ಪಲು, ಏ. ೧೮: ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಾಳೆಕೋವು ಗಿರಿಜನ ಹಾಡಿಯ ಲಕ್ಷಿö್ಮ ಎಂಬ ಮಹಿಳೆಗೆ ಸಹಾಯ ಧನ ನೀಡುವ ಮೂಲಕ ಗ್ರಾಮ ಪಂಚಾಯಿತಿ ಆಕೆಯ ಕಷ್ಟದಲ್ಲಿ ಭಾಗಿಯಾಗಿದೆ. ಕೆ. ಬಾಡಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಮಹಿಳೆಯ ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕಾಗಿ ಪಂಚಾಯಿತಿಯ ಶೇ. ೨೫ ವಿಶೇಷ ಅನುದಾನದಲ್ಲಿ ಹಣ ನೀಡಿದ್ದಾರೆ.
ಈ ವೇಳೆ ಪಂಚಾಯಿತಿ ಅಧ್ಯಕ್ಷ ಜೆ.ಆರ್. ಚಂದ್ರ, ಸದಸ್ಯರಾದ ರತೀಶ್ ಬಿದ್ದಪ್ಪ, ಪಿಡಿಒ ಕಳ್ಳಿಚಂಡ ಪೂಣಚ್ಚ ಹಾಗೂ ಇತರರು ಹಾಜರಿದ್ದರು.