*ಗೋಣಿಕೊಪ್ಪಲು, ಏ. ೧೮: ಯುಗಾದಿ ಹಬ್ಬದ ಪ್ರಯುಕ್ತ ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪಾರ್ವತಿ ದೇವಿಯ ವಾರ್ಷಿಕೋತ್ಸವ ನಡೆಯಿತು.
೩ ದಿನಗಳು ನಡೆದ ಕಾರ್ಯಕ್ರಮದಲ್ಲಿ ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ, ತೂಚಂಬಲಿ, ಇರುಬಳಕು, ದುರ್ಗಾ ಹೋಮ, ಮಹಾಪೂಜೆ, ದೇವರ ನೃತ್ಯ, ಸಾಮೂಹಿಕ ವಸಂತ ಪೂಜೆ, ಪಂಚಾಮೃತ ಅಭಿಷೇಕ, ಕಲಶ ಅಭಿಷೇಕ, ಮಹಾಪೂಜೆ ಮಂತ್ರಾಕ್ಷತೆ ಸೇರಿದಂತೆ ವಿಶೇಷವಾಗಿ ಭಕ್ತಾದಿಗಳಿಂದ ಸೇವೆ ನಡೆದವು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಮಳೆಗಾಗಿ ಪರ್ಜನ್ಯ ಪೂಜೆ: ವಿಶೇಷವಾಗಿ ಮಳೆಗಾಗಿ ಬೆಳಿಗ್ಗೆ ಶ್ರೀ ಉಮಾಮಹೇಶ್ವರಿ ದೇವಿಗೆ ಅರಶಿಣಾಭಿಷೇಕ, ಗಂಧದ ಅಭಿಷೇಕ, ಕುಂಕುಮ ಅಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ ಸೇರಿದಂತೆ ಹಲವು ಸೇವೆಗಳನ್ನು ಮಾಡುವ ಮೂಲಕ ಆಡಳಿತ ಮಂಡಳಿ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ ಅವರ ಉಪಸ್ಥಿತಿಯಲ್ಲಿ ಸಮಿತಿ ಸದಸ್ಯರುಗಳಾದ ಜಪ್ಪೆಕೊಡಿ ರಾಜ ಉತ್ತಪ್ಪ, ಕೊಪ್ಪಿರ ಸನ್ನಿ ಸೋಮಯ್ಯ, ಕುಲ್ಲಚಂಡ ಪ್ರಮೋದ್ ಗಣಪತಿ, ಪಿ.ವಿ. ಶೋಬಿತ್, ಎಸ್.ವಿ. ಸುರೇಶ್, ಕಾಡ್ಯಮಾಡ ಚೇತನ್, ವಿ.ಟಿ. ವಾಸು, ವ್ಯವಸ್ಥಾಪಕ ಮಧು ಇವರುಗಳು ಸಾರ್ವಜನಿಕ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು.