ಗುಡ್ಡೆಹೊಸೂರು, ಏ. ೧೮: ಇಲ್ಲಿನ ಉಪ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡಲಾಯಿತು. ಈ ವಿಭಾಗದ ವೈದ್ಯ ಡಾ. ಪ್ರತಾಪ್ ಸಾಗರ್, ಆರೋಗ್ಯ ಕಾರ್ಯಕರ್ತೆಯರಾದ ಭವಾನಿ, ನೀಲಮ್ಮ, ಆಶಾ ಕಾರ್ಯಕರ್ತೆ ರುಕ್ಮಿಣಿ, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ, ರೂಪಾಕ್ಷಿ ಮತ್ತು ಸಹಾಯಕಿ ಸೀತಮ್ಮ ಇವರುಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬೆಳಗ್ಗಿನಿಂದ ಈ ವಿಭಾಗದ ಅಧಿಕ ಮಂದಿ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಂಡರು,

ಸ್ಥಳದಲ್ಲಿ ಹಾಜರಿದ್ದ ಡಾ. ಪ್ರತಾಪ್ ಸಾಗರ್ ಅವರು ಮಧುಮೇಹ, ರಕ್ತದೊತ್ತಡ ಪರೀಕ್ಷೆಯನ್ನು ಸ್ಥಳದಲ್ಲಿ ನಡೆಸಿದರು. ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಡೆಯುವಂತೆ ಸರಕಾರದ ನಿಯಮವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಲಸಿಕೆ ಪಡೆಯಬಹುದಾಗಿದೆ. ಇದೀಗ ೪೫ ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತಿದೆ. ಗುಡ್ಡೆಹೊಸೂರು ವಿಭಾಗದಲ್ಲಿ ಶೇ. ೫೦ ಲಸಿಕೆ ನೀಡಲಾಗಿದೆ ಎಂದು ಹೇಳಿದರು.