ಮಡಿಕೇರಿ, ಏ. ೧೭: ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಕಳೆದ ದಿನಗಳಿಂದ ವಾತಾವರಣದಲ್ಲಿ ಆಗಿರುವ ಬದಲಾವಣೆಯ ಪರಿಣಾಮದಿಂದಾಗಿ ಮಳೆಯಾಗುತ್ತಿದೆ. ಗುಡುಗು - ಮಿಂಚಿನ ಸಹಿತವಾಗಿ ಅಲ್ಲಲ್ಲಿ ಮಳೆ ಸುರಿದಿದೆ. ಎರಡು - ಮೂರು ದಿನಗಳಿಂದ ಈ ಚಿತ್ರಣ ಎದುರಾಗುತ್ತಿದೆ. ಬಿಸಿಲಿನ ಪ್ರತಾಪದಿಂದಾಗಿ ಕಾಫಿ ಬೆಳೆಗಾರರು ಗುಡುಗು - ಮಿಂಚಿನ ಸಹಿತವಾಗಿ ಅಲ್ಲಲ್ಲಿ ಮಳೆ ಸುರಿದಿದೆ. ಎರಡು - ಮೂರು ದಿನಗಳಿಂದ ಈ ಚಿತ್ರಣ ಎದುರಾಗುತ್ತಿದೆ. ಬಿಸಿಲಿನ ಪ್ರತಾಪದಿಂದಾಗಿ ಕಾಫಿ ಬೆಳೆಗಾರರು ಗುಡುಗು - ಮಿಂಚಿನ ಸಹಿತವಾಗಿ ಅಲ್ಲಲ್ಲಿ ಮಳೆ ಸುರಿದಿದೆ. ಎರಡು - ಮೂರು ದಿನಗಳಿಂದ ಈ ಚಿತ್ರಣ ಎದುರಾಗುತ್ತಿದೆ. ಬಿಸಿಲಿನ ಪ್ರತಾಪದಿಂದಾಗಿ ಕಾಫಿ ಬೆಳೆಗಾರರು (ಮೊದಲ ಪುಟದಿಂದ) ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಗುಡುಗು - ಮಿಂಚಿನ ಸಹಿತವಾಗಿ ದಾರಾಕಾರವಾಗಿ ಮಳೆ ಸುರಿದಿದೆ. ಸೂರ್ಲಬ್ಬಿ ವಿಭಾಗದಲ್ಲೂ ಅಬ್ಬರದ ಮಳೆಯಾಗಿದೆ. ನಾಪೋಕ್ಲು - ನೆಲಜಿ, ವೀರಾಜಪೇಟೆ, ಗೋಣಿಕೊಪ್ಪಲು, ಸಿದ್ದಾಪುರ, ಅಭ್ಯತ್‌ಮಂಗಲ, ಮಕ್ಕಂದೂರು, ಕುಶಾಲನಗರ, ಕೂಡಿಗೆ ವಿಭಾಗಗಳಲ್ಲೂ ಮಳೆ ತುಸು ಹೆಚ್ಚಾಗಿ ಬಿದ್ದಿರುವ ಕುರಿತು ವರದಿಯಾಗಿದೆ. ತಾ. ೧೬ ರಂದು ದಕ್ಷಿಣಕೊಡಗಿನ ಟಿ.ಶೆಟ್ಟಿಗೇರಿ, ನೆಮ್ಮಲೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದರೂ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿರುವದು ರೈತರಿಗೆ ಆಘಾತ ಮೂಡಿಸಿದೆ.

ಏ. ೧೨ ರಿಂದಲೇ ಕೆಲದಿನಗಳ ಕಾಲ ಹವಾಮಾನದಲ್ಲಿ ಬದಲಾವಣೆಯಾಗುವ ಸಂಭವವಿದ್ದ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದನ್ನು ಸ್ಮರಿಸಬಹುದಾಗಿದೆ. ಹವಾಮಾನದ ಬದಲಾವಣೆಯ ಪರಿಣಾಮವಾಗಿ ಅನಿರೀಕ್ಷಿತವಾಗಿ ಅಡ್ಡಮಳೆ ಸುರಿದಿದೆಯಾದರೂ ಇದು ಬೆಳೆಗಾರರು, ರೈತರಿಗೆ ಒಂದಷ್ಟು ಉಪಕಾರವಾಗಿದೆ. ಅಲ್ಲದೆ, ಬಿಸಿಲಧಗೆಯಿಂದ ಪರಿತಪಿಸುತ್ತಿದ್ದ ಜನತೆಗೆ ಒಂದಷ್ಟು ನಿರಾಳತೆಯನ್ನು ತಂದAತಾಗಿದೆ.

ವೀರಾಜಪೇಟೆ ವರದಿ: ವೀರಾಜಪೇಟೆ ತಾಲೂಕಿಗೆ ಕಳೆದ ಒಂದು ವಾರದಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಯುಗಾದಿ ಹಬ್ಬದ ಹಿಂದಿನ ದಿನದಿಂದ ವರುಣನ ಆಗಮನವಾಗಿದೆ. ಕಳೆದ ವರ್ಷ ಏಪ್ರಿಲ್ ೯ ರಂದು ಮಳೆಯಾಗಿತ್ತು, ಈ ವರ್ಷ ಕೂಡಾ ಏಪ್ರಿಲ್ ೧೧ ರಿಂದ ಮಳೆ ಪ್ರಾರಂಭವಾಗಿದೆ.

ಮಾರ್ಚ್ ತಿಂಗಳ ಬಿಸಿಲ ಬೇಗೆಯಿಂದ ಸಾಕಾಗಿದ್ದ ಜನತೆಗೆ, ಕಾಫಿ ಕುಯಿಲಿನ ಬಳಿಕ ಸೊರಗಿದ್ದ ಕಾಫಿಗಿಡಗಳಿಗೆ ಇದರಿಂದ ಚೈತನ್ಯ ಬಂದAತಾಗಿದೆ. ಮಧ್ಯಾಹ್ನದವರೆಗೂ ಬಿಸಿಲ ಬೇಗೆ ಇರುತ್ತಿದ್ದು, ಮಧ್ಯಾಹ್ನದ ಬಳಿಕ ಗುಡುಗು ಮಿಂಚು ಸಹಿತ ಉತ್ತಮ ಮಳೆ ತಾಲೂಕಿನ ಹಲವೆಡೆ ಬಿದ್ದಿದೆ.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಮತ್ತು ಹವಾಮಾನ ಘಟಕದ ವಿಷಯ ತಜ್ಞರಾಗಿರುವ ಡಾ.ಹರೀಶ್ ಅವರು ಈ ವರ್ಷ ಕಳೆದ ವರ್ಷ ಏಪ್ರಿಲ್ ತಿಂಗಳು ಸುರಿದ ಮಳೆಗಿಂತ ಅಧಿಕ ಮಳೆ ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಆಗಿದೆ. ಇನ್ನು ಮೂರು ದಿನಗಳ ಕಾಲ ಸಾಧರಣ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

ಹಲವೆಡೆ ಹಾನಿ

ಗೋಣಿಕೊಪ್ಪ: ದ.ಕೊಡಗಿನ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಅಪಾರ ನಷ್ಟ ಸಂಭವಿಸಿರುವ ಕುರಿತೂ ವರದಿಯಾಗಿದೆ. ಗುಡುಗು ಸಹಿತ ಬಿದ್ದ ಮಳೆ, ವಿಪರೀತ ಗಾಳಿಗೆ ಗೋಣಿಕೊಪ್ಪ ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳು ಸೇರಿದಂತೆ ಹಲವು ಮನೆಗಳ ಶೀಟ್‌ಗಳು, ಹಂಚುಗಳು ಹಾರಿಹೋಗಿದ್ದು ಹಾನಿಯಾಗಿವೆ.

ಗೋಣಿಕೊಪ್ಪ ಚೆಸ್ಕಾಂ ವ್ಯಾಪ್ತಿಗೆ ಸೇರಿರುವ ಹೀರಣ್ಣ ಕಾಲೋನಿ, ಹಾತೂರು, ಕೋಣನಕಟ್ಟೆ, ಹೊಸಕೋಟೆ, ಕಳತ್ಮಾಡು, ಗೊಟ್ಟಡ ಈ ಭಾಗದಲ್ಲಿ ಸುರಿದ ಮಳೆ ಗಾಳಿಗೆ ೧೧ ವಿದ್ಯುತ್ ಕಂಬಗಳು, ೬೩ ಕೆವಿಯ ೨ ಟ್ರಾನ್ಸ್ಫಾರ್ಮರ್‌ಗಳು ಧರೆಗುರುಳಿದ ಪರಿಣಾಮ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಎರಡು ದಿನಗಳ ವಿದ್ಯುತ್ ವ್ಯತ್ಯಯ ಸಂಭವಿಸಿತ್ತು.

ಹೀರಣ್ಣ ಕಾಲೋನಿಯ ನಿವಾಸಿ ಚಂದ್ರನಾಯಕ್ ಎಂಬವರ ಮನೆಯ ಶೀಟ್‌ಗಳು ಗಾಳಿಗೆ ಹಾರಿ ಹೋಗಿದ್ದು ೫೦ ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ,ಸದಸ್ಯರಾದ ಜಮ್ಮಡ ಲವ ಭೀಮಯ್ಯ,ರೇಖಾಬಾಬು ಹಾಗೂ ಮುತ್ತುರಾಜ್, ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಯ ಮಾಲೀಕರಾದ ಚಂದ್ರನಾಯಕ್‌ರವರ ಮನೆ ದುರಸ್ತಿಗಾಗಿ ತಕ್ಷಣವೇ ಹತ್ತು ಶೀಟ್‌ಗಳನ್ನು ತರಿಸಿ ಮನೆ ದುರಸ್ಥಿ ಕಾರ್ಯಕ್ಕೆ ಸಹಕರಿಸಿದರು. ಇದೇ ಮಳೆಗಾಳಿಗೆ ನಗರದ ಅನುದಾನಿತ ಪ್ರೌಢಶಾಲೆ ಹಿಂಭಾಗದಲ್ಲಿರುವ ವೀರಾಜಪೇಟೆ ತಾಲೂಕು ವಕ್ಕಲಿಗರ ಸಂಘದ ಕಟ್ಟಡದ ಹಂಚುಗಳು ಹಾರಿಹೋಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ವಿಪರೀತ ಗಾಳಿಗೆ ಹಾರಿ ಹೋದ ಹಂಚುಗಳು ಸಮೀಪದ ಮನೆಗಳ ಮೇಲೆ ಬಿದ್ದು ಸಣ್ಣಪುಟ್ಟ ಹಾನಿಗಳು ಸಂಭವಿಸಿವೆ.

ನಡು ರಾತ್ರಿಯ ವೇಳೆ ಗುಡುಗು ಸಹಿತ ಭಾರಿ ಗಾಳಿ ಬೀಸುತ್ತಿರುವುದರಿಂದ ನಗರ ವ್ಯಾಪ್ತಿಯಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯವಾಗುತ್ತಿದೆ. ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಸಮಸ್ಯೆ ಪರಿಹರಿಸಲು ಸತತ ಪ್ರಯತ್ನ ಮುಂದುವರೆಸುತ್ತಿದ್ದಾರೆ.

ವಿಪರೀತ ಮಳೆ,ಗಾಳಿಯಿಂದಾಗಿ ವಿದ್ಯುತ್ ಕಂಬಗಳು,ಟ್ರಾನ್ಸ್ ಫಾರ್ಮರ್‌ಗಳು ಹಾಳಾಗುತ್ತಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ನಾಗರಿಕರಿಗೆ ವಿದ್ಯುತ್ ನೀಡಲು ಶ್ರಮಿಸುತ್ತೇವೆ. ಮಧ್ಯರಾತ್ರಿಯಲ್ಲಿ ಘಟನೆ ಸಂಭವಿಸುತ್ತಿರುವುದರಿAದ ತುರ್ತು ಕೆಲಸ ನಿರ್ವಹಿಸಲು ಚೆಸ್ಕಾಂ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಮುಂಜಾನೆ ಸ್ಥಳಕ್ಕೆ ತೆರಳಿ ವಿದ್ಯುತ್ ಕಂಬ ಬದಲಾಯಿಸುವುದು ಟ್ರಾನ್ಸ್ಫಾರ್ಮರ್‌ಗಳನ್ನು ಬದಲಾಯಿಸಿ ಆದಷ್ಟು ಬೇಗನೇ ಗ್ರಾಹಕರಿಗೆ ವಿದ್ಯುತ್ ನೀಡಲು ಶ್ರಮ ವಹಿಸುತ್ತಿದ್ದೇವೆ ಎಂದು ಗೋಣಿಕೊಪ್ಪ ಜೆ.ಇ. ಕೃಷ್ಣಕುಮಾರ್ ತಿಳಿಸಿದ್ದಾರೆ.

ವಿದ್ಯುತ್ ಕಂಬ ಬಿದ್ದು ಹಾನಿ

ನಿನ್ನೆ ರಾತ್ರಿ ವೇಳೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ. ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಕೆ.ಎಸ್. ಸುಶೀಲ ಹಾಗೂ ಚಂದ್ರಶೇಖರ್ ಎಂಬವರಿಗೆ ಸೇರಿದ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಮನೆಯ ಶೀಟುಗಳು, ಹೆಂಚುಗಳಿಗೆ ಹಾನಿಯಾಗಿದೆ. ಅಲ್ಲದೆ, ರಸ್ತೆ ಬದಿಯಲ್ಲಿ ಮೂರು ಕಂಬಗಳು ನೆಲಕ್ಕುರುಳಿದ್ದು, ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.