ಮಡಿಕೇರಿ, ಏ. ೧೭; ಒಂದೊಮ್ಮೆ ಆಕಾಶವಾಣಿ (ರೇಡಿಯೋ) ಅತ್ಯಂತ ಪ್ರಮುಖ ಮಾಧ್ಯಮವಾಗಿತ್ತು. ದೆಹಲಿಯಿಂದ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದ ನಡುವೆ ಪ್ರಾದೇಶಿಕವಾಗಿ ಕನ್ನಡ ವಾರ್ತೆಗಳು ಭಿತ್ತರಗೊಳ್ಳುತ್ತಿದ್ದವು. ನಂತರದಲ್ಲಿ ಬೆಂಗಳೂರು, ಧಾರವಾಡ, ಮಂಗಳೂರು ಹೀಗೆ ವಿವಿಧೆಡೆಗಳಲ್ಲಿ ನಿಲಯಗಳು ಆರಂಭಗೊAಡ ಬಳಿಕ ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಿ ಪ್ರಸಾರ ಕಾಣುವಂತಾಯಿತು. ಬರಬರುತ್ತಾ ಎಫ್ಎಂ ಕೇಂದ್ರಗಳು ಆರಂಭಗೊAಡ ಬಳಿಕ ಪ್ರಾದೇಶಿಕ ಕಾರ್ಯಕ್ರಮಗಳೊಂದಿಗೆ ಸ್ಥಳೀಯವಾಗಿಯೂಕಾರ್ಯಕ್ರಮಗಳ ಪ್ರಸಾರದೊಂದಿಗೆ ಆಯಾ ಪ್ರದೇಶದ ಭಾಷೆ, ಸಂಸ್ಕೃತಿಗೆ ಆದ್ಯತೆ ದೊರಕುವದರೊಂದಿಗೆ ಆಕಾಶವಾಣಿ ಕೂಡ ಮತ್ತೊಮ್ಮೆ ಸಮಾಜದ ಸಂಪರ್ಕ ಕೊಂಡಿಯಾಗಿ ಬೆಸೆದುಕೊಂಡಿತು. ನಂತರದ ದಿನಗಳಲ್ಲಿ ನಿಲಯಗಳಲ್ಲಿನ ಆದಾಯದ ಕೊರತೆ, ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲವೊಂದು ಕೇಂದ್ರಗಳ ಪ್ರಸಾರ ಕಾರ್ಯಗಳಿಗೆ ಹಿನ್ನೆಡೆಯುಂಟಾಯಿತು. ಈ ನಡುವೆ ಇದೇ ಕಾರಣಕ್ಕಾಗಿ ರಾಜ್ಯದ ಎಲ್ಲ ಕೇಂದ್ರಗಳ ಪ್ರಸಾರವನ್ನು ಕೇಂದ್ರೀಕೃತಗೊಳಿಸುವ ಬಗ್ಗೆ ಚಿಂತನೆ ಹರಿಸಿದ ಪ್ರಸಾರಭಾರತಿ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಇದೀಗ ಸದ್ಯದ ಮಟ್ಟಿಗೆ ಆದೇಶವನ್ನು ಹಿಂಪಡೆದು ಈ ಹಿಂದೆ ಇದ್ದಂತೆಯೇ ಕಾರ್ಯಕ್ರಮಗಳನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದೆ.
ಒಂದು ಕಾಲದಲ್ಲಿ ಪತ್ರಿಕೆಗಳು ಹಾಗೂ ರೇಡಿಯೋಗಳೇ ಪ್ರಮುಖ ಮಾಧ್ಯಮಗಳಾಗಿದ್ದವು. ಟಿವಿ ಮಾಧ್ಯಮ ಬಂದ ನಂತರ ರೇಡಿಯೋಗಳಿಗೆ ಬೇಡಿಕೆ ಕಡಿಮೆಯಾಗುತ್ತಾ ಬಂದಿತು.
(ಮೊದಲ ಪುಟದಿಂದ) ಮೊಬೈಲ್, ಸಾಮಾಜಿಕ ಜಾಲತಾಣಗಳು ಬಂದ ಬಳಿಕವಂತೂ ರೇಡಿಯೋ ಕೇಳುಗರ ಸಂಖೈ ಇನ್ನೂ ಕಡಿಮೆಯಾದವು. ಆದರೆ, ಎಫ್ಎಂ ಕೇಂದ್ರಗಳು ಬಂದ ನಂತರ ಸ್ಥಳೀಯವಾಗಿ ಕಾರ್ಯಕ್ರಮಗಳು ಪ್ರಸಾರ ಕಂಡುಕೊAಡ ಬಳಿಕ ಆಯಾ ಪ್ರದೇಶಗಳಲ್ಲಿ ಮತ್ತೆ ರೇಡಿಯೋ ಸ್ವರ ಕೇಳಲಾರಂಭಿಸಿತು. ಆದರೂ ಕೆಲವೊಂದು ಕೇಂದ್ರಗಳಿAದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ಕಾರ್ಯಕ್ರಮಗಳು ಮೊಟಕುಗೊಳ್ಳುವದರೊಂದಿಗೆ ಸ್ಥಗಿತಗೊಂಡವು. ಈ ಹಿನ್ನೆಲೆಯಲ್ಲಿ ರಾಜ್ಯದ ಎಫ್ಎಂ ಸೇರಿದಂತೆ ಎಲ್ಲ ಕೇಂದ್ರಗಳಿAದ ಪ್ರಸಾರವಾಗುವ ಕೆಲವೊಂದು ಪ್ರಮುಖ ಕಾರ್ಯಕ್ರಮಗಳನ್ನು ಬೆಂಗಳೂರು ಕೇಂದ್ರದ ಮೂಲಕವೇ ನೇರ ಪ್ರಸಾರ ಮಾಡುವ ಬಗ್ಗೆ ಆದೇಶ ಹೊರಡಿಸಿತ್ತು. ಅದರಂತೆ ಕಳೆದ ತಾ. ೧೩ ಹಾಗೂ ೧೪ ರಂದು ಬದಲಾವಣೆಗಳೊಂದಿಗೆ ಕಾರ್ಯಕ್ರಮಗಳೂ ಮೂಡಿಬಂದವು.
ವಿರೋಧಕ್ಕೆ ಗೆಲುವು: ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರಮುಖ ಕಾರ್ಯಕ್ರಮಗಳಾದ ಚಿಂತನ, ಮಹಿಳಾಲೋಕ, ಮಕ್ಕಳ ಕಾರ್ಯಕ್ರಮ, ಯುವವಾಣಿ ಸೇರಿದಂತೆ ಪ್ರಮುಖ ಕಾಂiÀiðಕ್ರಮಗಳನ್ನು ಸ್ಥಳೀಯ ಕೇಂದ್ರಗಳು ಸಂಗ್ರಹಿಸಿ, ಧ್ವನಿಮುದ್ರಿಸಿ ಬೆಂಗಳೂರಿಗೆ ಕಳುಹಿಸಿಕೊಡಬೇಕಿದ್ದು, ಅಲ್ಲಿಂದ ಎಲ್ಲ ಕೇಂದ್ರಗಳಲ್ಲೂ ನೇರ ಪ್ರಸಾರ ಮಾಡುವ ಬಗ್ಗೆ ಪ್ರಸಾರ ಭಾರತಿ ಆದೇಶಿಸಿತ್ತು. ಇದರಿಂದ ಸ್ಥಳೀಯ ಕೇಂದ್ರಗಳಿಗೆ ಹಾಗೂ ಪ್ರತಿಭೆಗಳಿಗೆ ಅವಕಾಶ ವಂಚಿತವಾಗಲಿದೆ. ಅಲ್ಲದೆ, ಸ್ಥಳೀಯ ಕೇಂದ್ರಗಳಿಗೂ ಹಿನ್ನಡೆಯಾಗಲಿದೆಯೆಂದು ಕಲಾವಿದರು, ಕೇಳುಗರು, ಆಕಾಶವಾಣಿ (ಮೊದಲ ಪುಟದಿಂದ) ಮೊಬೈಲ್, ಸಾಮಾಜಿಕ ಜಾಲತಾಣಗಳು ಬಂದ ಬಳಿಕವಂತೂ ರೇಡಿಯೋ ಕೇಳುಗರ ಸಂಖೈ ಇನ್ನೂ ಕಡಿಮೆಯಾದವು. ಆದರೆ, ಎಫ್ಎಂ ಕೇಂದ್ರಗಳು ಬಂದ ನಂತರ ಸ್ಥಳೀಯವಾಗಿ ಕಾರ್ಯಕ್ರಮಗಳು ಪ್ರಸಾರ ಕಂಡುಕೊAಡ ಬಳಿಕ ಆಯಾ ಪ್ರದೇಶಗಳಲ್ಲಿ ಮತ್ತೆ ರೇಡಿಯೋ ಸ್ವರ ಕೇಳಲಾರಂಭಿಸಿತು. ಆದರೂ ಕೆಲವೊಂದು ಕೇಂದ್ರಗಳಿAದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ಕಾರ್ಯಕ್ರಮಗಳು ಮೊಟಕುಗೊಳ್ಳುವದರೊಂದಿಗೆ ಸ್ಥಗಿತಗೊಂಡವು. ಈ ಹಿನ್ನೆಲೆಯಲ್ಲಿ ರಾಜ್ಯದ ಎಫ್ಎಂ ಸೇರಿದಂತೆ ಎಲ್ಲ ಕೇಂದ್ರಗಳಿAದ ಪ್ರಸಾರವಾಗುವ ಕೆಲವೊಂದು ಪ್ರಮುಖ ಕಾರ್ಯಕ್ರಮಗಳನ್ನು ಬೆಂಗಳೂರು ಕೇಂದ್ರದ ಮೂಲಕವೇ ನೇರ ಪ್ರಸಾರ ಮಾಡುವ ಬಗ್ಗೆ ಆದೇಶ ಹೊರಡಿಸಿತ್ತು. ಅದರಂತೆ ಕಳೆದ ತಾ. ೧೩ ಹಾಗೂ ೧೪ ರಂದು ಬದಲಾವಣೆಗಳೊಂದಿಗೆ ಕಾರ್ಯಕ್ರಮಗಳೂ ಮೂಡಿಬಂದವು.
ವಿರೋಧಕ್ಕೆ ಗೆಲುವು: ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರಮುಖ ಕಾರ್ಯಕ್ರಮಗಳಾದ ಚಿಂತನ, ಮಹಿಳಾಲೋಕ, ಮಕ್ಕಳ ಕಾರ್ಯಕ್ರಮ, ಯುವವಾಣಿ ಸೇರಿದಂತೆ ಪ್ರಮುಖ ಕಾಂiÀiðಕ್ರಮಗಳನ್ನು ಸ್ಥಳೀಯ ಕೇಂದ್ರಗಳು ಸಂಗ್ರಹಿಸಿ, ಧ್ವನಿಮುದ್ರಿಸಿ ಬೆಂಗಳೂರಿಗೆ ಕಳುಹಿಸಿಕೊಡಬೇಕಿದ್ದು, ಅಲ್ಲಿಂದ ಎಲ್ಲ ಕೇಂದ್ರಗಳಲ್ಲೂ ನೇರ ಪ್ರಸಾರ ಮಾಡುವ ಬಗ್ಗೆ ಪ್ರಸಾರ ಭಾರತಿ ಆದೇಶಿಸಿತ್ತು. ಇದರಿಂದ ಸ್ಥಳೀಯ ಕೇಂದ್ರಗಳಿಗೆ ಹಾಗೂ ಪ್ರತಿಭೆಗಳಿಗೆ ಅವಕಾಶ ವಂಚಿತವಾಗಲಿದೆ. ಅಲ್ಲದೆ, ಸ್ಥಳೀಯ ಕೇಂದ್ರಗಳಿಗೂ ಹಿನ್ನಡೆಯಾಗಲಿದೆಯೆಂದು ಕಲಾವಿದರು, ಕೇಳುಗರು, ಆಕಾಶವಾಣಿ ಸಿಬ್ಬಂದಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ಕೈಬಿಟ್ಟು ಎಂದಿನAತೆ ಕಾರ್ಯಕ್ರಮ ಮುಂದುವರಿಸುವAತೆ ಪ್ರಸಾರಭಾರತಿ ಸೂಚಿಸಿದೆ.
ಮಡಿಕೇರಿಯಲ್ಲಿ ಅಡ್ಡಿಯಿಲ್ಲ
ಮಡಿಕೇರಿ ಆಕಾಶವಾಣಿ ಕೇಂದ್ರ ೧೯೯೩ರಲ್ಲಿ ಆರಂಭಗೊAಡಿತಾದರೂ ಅಷ್ಟೇನು ಜನಮನ್ನಣೆ ಗಳಿಸಿರಲಿಲ್ಲ. ಕೆಲವೊಂದು ಸ್ಥಳೀಯ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಬಹುತೇಕ ಬೆಂಗಳೂರು ಕೇಂದ್ರದ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿದ್ದವು. ನಂತರದಲ್ಲಿ ಇಂದಿರಾ ಏಸುಪ್ರಿಯ ಗಜರಾಜ್ ಅವರು ನಿಲಯ ನಿರ್ದೇಶಕಿಯಾಗಿ ಬಂದ ನಂತರ ಸ್ಥಳೀಯವಾದ ಭಾಷೆ, ಸಂಸ್ಕೃತಿಗಳನ್ನು ಬಿಂಬಿಸುವAತಹ ಕಾರ್ಯಕ್ರಮಗಳನ್ನು ಹಾಕಿಕೊಂಡ ಬಳಿಕ, ಅದರಲ್ಲೂ ನಿಧನ ವಾರ್ತೆ ಹಾಗೂ ಕೊಡವ, ಅರೆಭಾಷೆ, ಬ್ಯಾರಿ ಭಾಷೆಗಳಲ್ಲಿ ವಾರ್ತೆ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿದ್ದರಿಂದ ಮಡಿಕೇರಿ ಆಕಾಶವಾಣಿ ಮತ್ತೆ ಮನೆ ಮಾತಾಯಿತು. ಪ್ರಸ್ತುತ ಕೂಡ ಯುವ, ಮಹಿಳೆ, ಕೃಷಿ ಸೇರಿದಂತೆ ಉತ್ತಮ ಕಾರ್ಯಕ್ರಮಗಳೊಂದಿಗೆ ಹಾಗೂ ಜಾಹೀರಾತು ಮೂಲಕವೂ ಉತ್ತಮ ಆದಾಯದೊಂದಿಗೆ ಮುನ್ನಡೆಯುತ್ತಿದೆ. ಹಾಗಾಗಿ ಇಲ್ಲಿನ ಸ್ಥಳೀಯ ಕಾರ್ಯಕ್ರಮಗಳಿಗೆ ಯಾವದೇ ಅಡಚಣೆಯಿಲ್ಲದೆ ಮುಂದುವರಿಯಲಿದೆ. ಆದರೂ ಪ್ರಸಾರ ಭಾರತಿಯ ನಿಲುವನ್ನು ಹೇಳಲಾಗದು. ಸದ್ಯಕ್ಕೆ ಇಲ್ಲಿ ಅಧಿಕಾರಿಗಳು ಹಾಗೂ ಉದ್ಘೋಷಕರಿಗೆ ಕೊರತೆಯಿಲ್ಲ, ಸಿಬ್ಬಂದಿಗಳ ಕೊರತೆ ಒಂದಿಷ್ಟಿದ್ದು, ಜನಪ್ರತಿನಿಧಿಗಳು ಕೊಂಚ ಇಚ್ಛಾಶಕ್ತಿ ತೋರಿದರೆ ಮುಂದಕ್ಕೂ ಈ ಕೇಂದ್ರವನ್ನು ಉಳಿಸಿಕೊಳ್ಳಬಹುದು.
-ಸಂತೋಷ್